ಡೆಕ್ಕ ಸಂಸ್ಥೆಯಿಂದ ಗ್ರಾಮಸ್ಥರಿಗೆ ಕಿರುಕುಳ: ಸುಚರಿತ ಶೆಟ್ಟಿ ದೂರು
ಕಡಂದಲೆಯಲ್ಲಿ ಪ್ರಜಾಸೇವೆ ಆಂದೋಲನ
ಪಾಲಡ್ಕ ಗ್ರಾಮ ಪಂಚಾಯತ್ ನ ವರ್ಣಬೆಟ್ಟು ಎಂಬ ಪ್ರದೇಶದಲ್ಲಿ ಸುಮಾರು ನಾಲ್ಕು ಎಕರೆಯಷ್ಟು ಜಾಗವನ್ನು ಖರೀದಿಸಿ ಆಸು ಪಾಸಿನಲ್ಲಿರುವ ಕುಮ್ಕಿ, ಸರಕಾರಿ ಹಾಗೂ ಖಾಸಗಿ ಸಣ್ಣ ಜಾಗಗಳನ್ನು ಕಬಳಿಸಲು ಹುನ್ನಾರ ನಡೆಸುತ್ತಿರುವುದಲ್ಲದೆ, ಊರವರಿಗೆ ಕಾನೂನು ಹೆಸರಿನಲ್ಲಿ ತೊಂದರೆ ನೀಡುತ್ತಿರುವ ಬಗ್ಗೆ ದೂರಿದರು.
ಶ್ರೀಧರ್ ಎಸ್ ಮುಂದಲಮನಿ ಅವರು ಪ್ರಜಾಸೇವೆ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಜನರ ಸಮಸ್ಯೆಗಳನ್ನು ಆಲಿಸಲು ತಾಲೂಕು ಮಟ್ಟದ ಅಧಿಕಾರಿಗಳು ಜನರ ಬಳಿಗೆ ತೆರಳುವ ಕಾರ್ಯಕ್ರಮ ಈ ಪ್ರಜಾಂದೋಲನ ಆಗಿದೆ. ಸಾರ್ವಜನಿಕರಿಗೆ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಿ ತಿಳುವಳಿಕೆ ನೀಡುವುದೇ ಈ ಆಂದೋಲನದ ಉದ್ದೇಶ. ಈ ಆಂದೋಲನವನ್ನು ಸರಕಾರ ಗಂಭೀರವಾಗಿ ಪರಿಗಣಿಸಿರುವುದಾಗಿ ತಿಳಿಸಿದರು.
ತಹಶೀಲ್ದಾರ್ ಪುಟ್ಟರಾಜು ಡಿ., ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭವಾನಿ ಶಂಕರ್ ಶೆಟ್ಟಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಕನ್ನಡ ಜಾಗ್ರತ ಸಮಿತಿಯ ಸದಸ್ಯ ರಾಜೇಶ್ ಕಡಲಕೆರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪ ತಹಶೀಲ್ದಾರ್ ರಾಮ್ ಕೆ ಸ್ವಾಗತಿಸಿ ಧನ್ಯವಾದವಿತ್ತರು. ಗ್ರಾಮ ಕರಣಿಕ ಅರ್ಜುನ್ ಸಜ್ಜನ್ ಕಾರ್ಯಕ್ರಮ ನಿರೂಪಿಸಿದರು. ಉಪತಹಶೀಲ್ದಾರ್ ಮುನೀರ್ ಹಾಗೂ ಕಂದಾಯ ನಿರೀಕ್ಷಕ ರವಿಪ್ರಸಾದ್ ಮಲ್ಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
