Kundapura: ಕುಂದಾಪುರ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
Monday, January 29, 2024
ಕುಂದಾಪುರ: ಇಲ್ಲಿನ ಚಿಕ್ಕನ್ ಸಾಲ್ ರಸ್ತೆಯ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ಫೆ. 20 ರಿಂದ ಫೆ.23ರ ವರೆಗೆ ನಡೆಯುವ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಜ.28 ರಂದು ಬೆಳಗ್ಗೆ 10 ಗಂಟೆಗೆ ದೇವಳದ ಸಾನಿಧ್ಯದಲ್ಲಿ ನಡೆಯಿತು.
ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಾರ್ಕೂರು ಶ್ರೀ ಮಹಾಸಂಸ್ಥಾನದ ಆಡಳಿತಾಧಿಕಾರಿ ಸಟ್ವಾಡಿ ಅನಿಲ್ ಕುಮಾರ್ ಶೆಟ್ಟಿ ಬಿಡುಗಡೆ ಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಶ್ರೀ ಮೈಲಾರೇಶ್ವರ ದೇವಸ್ಥಾನದ ಕೆ. ರಮೇಶ್ ಬಿಲ್ಲವ, ಶ್ರೀ ನಾಗ ಬೊಬ್ಬರ್ಯ ಹ್ಯಾಗುಳಿ ಹಾಗೂ ಪರಿವಾರ ದೈವಸ್ಥಾನದ ಮಾಜಿ ಅಧ್ಯಕ್ಷ ಅಣ್ಣಪ್ಪ ಕೆ.ವಿ. ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಧರ್ಮದರ್ಶಿ ಗಣಪತಿ ಸುವರ್ಣ ಮತ್ತು ಜಲಜ ಸುವರ್ಣ ಭಾಗವಹಿಸಿದ್ದರು.
ಉತ್ಸವ ಸಮಿತಿಯ ಗೌರವಾಧ್ಯಕ್ಷ ಸೀತಾರಾಮ ಹೇರಿಕುದ್ರು, ಅಧ್ಯಕ್ಷ ಪ್ರಕಾಶ್ ಕೆ.ಬಿ. ಸದಸ್ಯರಾದ ಚಂದ್ರಶೇಖರ್, ಶಿವಪ್ರಸಾದ್ ಹೆಗ್ಡೆ, ಕೃಷ್ಣಮೂರ್ತಿ, ರಮೇಶ್ ಪೂಜಾರಿ ಮೇಲ್ ಹಿತ್ಲು, ವಿಷ್ಣು ಕೆ.ಬಿ, ಸಂತೋಷ್, ಮಿಥುನ್ ಸುವರ್ಣ, ಮಾಲತಿ, ವೀಣಾ ಪ್ರಕಾಶ್, ಪ್ರೀತಿ ಸುವರ್ಣ, ಶಾರದಾ ವಿಜಯ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀಧರ್ ಸುವರ್ಣ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ರಶ್ಮಿರಾಜ್ ನಿರೂಪಿಸಿ, ವಂದಿಸಿದರು.

