Moodubidire: ಆಳ್ವಾಸ್ ವಿದ್ಯಾರ್ಥಿಯ ಸಂಶೋಧನಾ ಯೋಜನೆ ಆಯ್ಕೆ

Moodubidire: ಆಳ್ವಾಸ್ ವಿದ್ಯಾರ್ಥಿಯ ಸಂಶೋಧನಾ ಯೋಜನೆ ಆಯ್ಕೆ


ಮೂಡುಬಿದಿರೆ: ಆಳ್ವಾಸ್ ಸೆಂಟ್ರಲ್ ಸ್ಕೂಲ್‌ನ ೯ನೇ ತರಗತಿಯ ವಿದ್ಯಾರ್ಥಿ ಅಮೋಘ್ ಎ. ಹೆಬ್ಬಾರ್ ಮಾರ್ಚ್ ತಿಂಗಳಲ್ಲಿ ಉತ್ತರ ಆಫ್ರಿಕಾದ ಟ್ಯುನೀಶಿಯಾದಲ್ಲಿ ನಡೆಯುವ ಅಂತರರಾಷ್ಟ್ರೀಯ ವಾರ್ಷಿಕ ಮೆಗಾ ಸೈನ್ಸ್ ಫೆಸ್ಟಿವಲ್, IಈಇSಖಿನಲ್ಲಿ 'ಕೀಟ ಮತ್ತು ಕಳೆಗಳನ್ನು ನಿಯಂತ್ರಿಸಲು ನೈಸರ್ಗಿಕ ವಿಧಾನ' ಶೀರ್ಷಿಕೆಯ ಸಂಶೋಧನಾ ಯೋಜನೆಯನ್ನು ಪ್ರಸ್ತುತಪಡಿಸಲು ಅರ್ಹತೆ ಪಡೆದಿದ್ದಾರೆ.

ಗುಜರಾತ್‌ನ ರಾಜಕೋಟ್‌ನಲ್ಲಿ ನಡೆದ ರಾಷ್ಟೀಯ ಮಟ್ಟದ ಭಾರತೀಯ ವಿಜ್ಞಾನ ಮತ್ತು ಇಂಜಿನಿಯರಿಂಗ್ ಮೇಳದಲ್ಲಿ ಬೆಳ್ಳಿ ಪದಕ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾದೇಶಿಕ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ್ದ ಅಮೋಘ್, ಇತ್ತೀಚಿಗೆ ಕಲ್ಬುರ್ಗಿಯಲ್ಲಿ ನಡೆದ ರಾಜ್ಯ ಮಟ್ಟದ ರಾಷ್ಟೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ ಮೇಳದಲ್ಲಿ ತಮ್ಮ ಸಂಶೋಧನಾ ಯೋಜನೆಯನ್ನು ಪ್ರದರ್ಶಿಸಿದ್ದರು. ಆಳ್ವಾಸ್ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಚ್. ಅಜಿತ್ ಹೆಬ್ಬಾರ್ ಮಾರ್ಗದರ್ಶನ ನೀಡಿದ್ದರು. 

ವಿದ್ಯಾರ್ಥಿಯ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಮತ್ತಿತರರಿದದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article