Moodubidire: ರಾಷ್ಟ್ರೀಯ ಫ್ಲೋರ್ ಬಾಲ್ ಚಾಂಪಿಯನ್ ಶಿಫ್: ಸನ್ಮಾನ

Moodubidire: ರಾಷ್ಟ್ರೀಯ ಫ್ಲೋರ್ ಬಾಲ್ ಚಾಂಪಿಯನ್ ಶಿಫ್: ಸನ್ಮಾನ


ಮೂಡುಬಿದಿರೆ: ಇಂಟರ್‌ನ್ಯಾಷನಲ್ ಫ್ಲೋರ್ ಬಾಲ್ ಫೆಡರೇಶನ್ ಹಾಗೂ ಫ್ಲೋರ್ ಬಾಲ್ ಅಸೋಸಿಯೇಷನ್ ತಮಿಳುನಾಡು ಮತ್ತು ಫಿಟ್ ಇಂಡಿಯಾ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಜ.25-28 ವರೆಗೆ ನಡೆದ 17ನೇ ರಾಷ್ಟ್ರೀಯ ಫ್ಲೋರ್ ಬಾಲ್ ಚಾಂಪಿಯನ್ ಶಿಫ್ 2023-24ರಲ್ಲಿ ಕರ್ನಾಟಕ ತಂಡವು ಜಯಗಳಿಸಿದ್ದು, ಈ ತಂಡದಲ್ಲಿ ಎಡಪದವು ಸ್ವಾಮಿ ವಿವೇಕಾನಂದ ಪ.ಪೂ. ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಆಟವಾಡಿದ್ದು, ಅವರನ್ನು ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ವತಿಯಿಂದ ಮಂಗಳವಾರ ಸನ್ಮಾನಿಸಿ ಗೌರವಿಸಲಾಯಿತು.

 17ನೇ ವರ್ಷದ ಕೆಳಗಿನ ಬಾಲಕರ ವಿಭಾಗದಲ್ಲಿ ಪ್ರಥಮ ಪಿಯುಸಿಯ ಕಲಾ ವಿಭಾಗದ ಚರಣ್, ವಾಣಿಜ್ಯ ವಿಭಾಗದ ಸತ್ಯೇಂದ್ರ ಮತ್ತು ಉಮೇಶ್ ಹಾಗೂ 19 ವರ್ಷದ ಕೆಳಗಿನ ಬಾಲಕರ ವಿಭಾಗದಲ್ಲಿ ಪ್ರಥಮ ಪಿಯುಸಿಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಬಿನ್ವಿತ್ ಅವರನ್ನು ಹೆತ್ತವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

 ಫೆಬ್ರವರಿ 16-18ವರೆಗೆ ಗುಜರಾತಿನಲ್ಲಿ ನಡೆಯುವ ರಾಷ್ಟ್ರೀಯ ಜ್ಯೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಭಾಗವಹಿಸಲಿರುವ 9ನೇ ತರಗತಿಯ ವಿದ್ಯಾರ್ಥಿನಿ ರಕ್ಷಿತಾ ಅವರನ್ನು ಈ ಸಂದರ್ಭದಲ್ಲಿ ಗೌರವಿಸಿ ಶುಭ ಹಾರೈಸಲಾಯಿತು.

  ಸ್ವಾಮಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಗೋಪಾಲ್ ಕಾರಂತ್, ಕೋಶಾಧಿಕಾರಿ ನವೀನ್ ಹೊಸಮನೆ, ವಿಜಯ ಗೌಡ, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲೆ ಗಾಯತ್ರಿ, ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಮೊಗೆರಾಯ, ಸಂಸ್ಥೆಯ ಆಡಳಿತಾಧಿಕಾರಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೇಮನಾಥ್ ಶೆಟ್ಟಿ, ದೈ.ಶಿ.ಶಿ. ಕರುಣಾಕರ ಶೆಟ್ಟಿ, ಉಪನ್ಯಾಸಕರು, ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article