Mangalore: ದೇಶವಾಸಿಗಳಿಗೆ ನಿರಾಶೆಯ ಬಜೆಟ್
Thursday, February 1, 2024
ಮಂಗಳೂರು: ಕೇಂದ್ರ ಸರಕಾರದ ಮಧ್ಯಂತರ ಬಜೆಟ್‌ನಲ್ಲಿ ಬಡವರು, ಮಧ್ಯಮ ವರ್ಗವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಆದಾಯ ತೆರಿಗೆದಾರರ ನಿರೀಕ್ಷೆ ಹುಸಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರತಿಕ್ರಿಯಿಸಿದ್ದಾರೆ.
ವಿತ್ತ ಸಚಿವರು 55 ನಿಮಿಷಗಳ ಕಾಲ ಚುನಾವಣಾ ಭಾಷಣ ಮಾಡಿದರೇ ಹೊರತು ದೇಶದ ಅಭಿವೃದ್ಧಿ ದೃಷ್ಟಿಕೋನದಿಂದ ಯಾವುದೇ ಯೋಜನೆ ಪ್ರಕಟಿಸಿಲ್ಲ. ದೇಶದ ಆದಾಯ ಮೂಲವಾದ ಕೃಷಿ, ಉದ್ಯಮ, ಸೇವಾ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ಬಹುನಿರೀಕ್ಷೆಯಿಂದ ಬಜೆಟ್‌ನ್ನು ಕಾಯುತ್ತಿದ್ದ ದೇಶವಾಸಿಗಳಿಗೆ ಕೇಂದ್ರ ಸರಕಾರ ನಿರಾಶೆ ಮೂಡಿಸಿದೆ ಎಂದು ತಿಳಿಸಿದರು.