
Mangalore: ಕುಡುಂಬೂರು ನಡುಗಿರಿ ಗ್ರಾಮದೈವಗಳ ನೇಮೋತ್ಸವಕ್ಕೆ ಜಿಲ್ಲಾಧಿಕಾರಿ ಭೇಟಿ
Tuesday, February 6, 2024
ಬೈಕಂಪಾಡಿ: ಇಲ್ಲಿನ ಬೈಕಂಪಾಡಿ ಕೈಗಾರಿಕಾ ವಲಯದ ಮುಂಗಾರು ಬಸ್ ನಿಲ್ದಾಣದ ಸಮೀಪದಲ್ಲಿರುವ ಕುಡುಂಬೂರು ನಡುಗಿರಿ ಗ್ರಾಮದೈವ ಜಾರಂದಾಯ ಮತ್ತು ಸಪರಿವಾರ ದೈವಗಳ ದೈವಸ್ಥಾನದ ನೇಮೋತ್ಸವಕ್ಕೆ ಫೆ.4 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಗಂಧ ಪ್ರಸಾದವನ್ನು ಸ್ವೀಕರಿಸಿದರು.
ಅನಂತರ ರಾತ್ರಿ ಪಿಲಿಚಂಡಿ ದೈವದ ನೇಮೋತ್ಸವವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಡಿ.ಮಣಿಯವರು, ಸೇವಾ ಭಾರತಿ ಟ್ರಸ್ಟ್ ನ ರಾಜ್ಯ ದಕ್ಷಿಣ ಪ್ರಾಂತ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ.ಸಿ. ಚೆನ್ನಯ್ಯ ಸ್ವಾಮಿ ಮತ್ತು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಆಗಮಿಸಿದ್ದರು.
ಇವರನ್ನು ನಡುಗಿರಿ ಜಾರಂದಾಯ ದೈವಸ್ಥಾನದ ಆಡಳಿತ ಸಮಿತಿ ಮತ್ತು ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಸ್ವಾಗತಿಸಿದರು.