Konaje: ಅಸೈಗೋಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ
ಪ್ರಜಾಪ್ರಭುತ್ವದ ನಿಜವಾದ ಮೌಲ್ಯವನ್ನು ಪ್ರತಿಪಾದಿಸುವ ಪಕ್ಷ ಅದು ಬಿಜೆಪಿ: ಕ್ಯಾ. ಬ್ರಿಜೇಶ್ ಚೌಟ
ಉಳ್ಳಾಲ: ಪ್ರಜಾಪ್ರಭುತ್ವದ ನಿಜವಾದ ಮೌಲ್ಯವನ್ನು ಪ್ರತಿಪಾದಿಸುವ ಪಕ್ಷ ಅದು ಬಿಜೆಪಿ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಈ ಮಣ್ಣಿನ ಗೌರವವನ್ನು ಇಡೀ ಪ್ರಪಂಚಕ್ಕೆ ಪಸರಿಸಿದ್ದಾರೆ. ಮೋದಿಯವರ ಯೋಜನೆಗಳನ್ನು ಮನೆಮನೆಗಳಿಗೆ ತಲುಪಿಸಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಪಣ ತೊಡೋಣ ಎಂದು ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರು ಹೇಳಿದರು.
ಅವರು ಭಾರತೀಯ ಜನತಾ ಪಾರ್ಟಿ ಮಂಗಳೂರು ಮಂಡಲ ವತಿಯಿಂದ ಭಾನುವಾರ ಅಸೈಗೋಳಿಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದ.ಕ.ಜಿಲ್ಲೆ ಹಿಂದುತ್ವದ ಭದ್ರಕೋಟೆ. ಹಿಂದುತ್ಚದ ಆಧಾರದಲ್ಲೇ ಜಿಲ್ಲೆಯನ್ನು ಕಟ್ಟಿ ಬೆಳೆಸಿದ್ದೇವೆ. ಇದರಲ್ಲಿ ಯಾರಿಗೆಲ್ಲ ಸಂಶಯ ವಿದೆಯೋ ಅವರಿಗೆಲ್ಲ ಈ ಚುನಾವಣೆಯ ಮೂಲಕ ಉತ್ತರ ಕೊಡೋಣ ಹಾಗೂ ಮೋದಿಜಿಯವರ ಸದೃಢ ಭಾರತ ನಿರ್ಮಾಣದ ಸಂಕಲ್ಪಕ್ಕೆ ನಾವೆಲ್ಲರೂ ಶಕ್ತಿ ತುಂಬುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡೋಣ ಎಂದು ಹೇಳಿದರು.
ದ.ಕ. ಜಿಲ್ಲೆ ಸಾಂಸ್ಕೃತಿಕ ಶ್ರೀಮಂತಿಕೆಯ ಜಿಲ್ಲೆ. ದೈವ ದೇವರ ನಾಡು. ಈಗಾಗಲೇ ಅನೇಕ ಯೋಜನೆಗಳು ಜಿಲ್ಲೆಗೆ ಹರಿದು ಬಂದಿವೆ. ಅದನ್ನು ಪೂರ್ಣಗೊಳಿಸುವುದರೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕನಸು, ಪರಿಕಲ್ಪನೆಯನ್ನು ಇಟ್ಡುಕೊಂಡಿದ್ದೇನೆ.ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಿಲ್ಲೆಗೆ ಉತ್ತಮ ಅವಕಾವಿದೆ. ದ.ಕ.ಜಿಲ್ಲೆಯ ದೇವಳ, ಪರಿಸರವನ್ನು ಇಡೀ ವಿಶ್ವವ್ಯಾಪಿಯಾಗಿ ತಲುಪಿಸಬೇಕಿದೆ. ಬೀಚ್ ಅಭಿವೃದ್ದಿಗೊಳಿಸಿ ಉದ್ಯೋಗ ಸೃಷ್ಟಿ ಮಾಡುವ ಯೋಜನೆ ಇದೆ. ಅಲ್ಲದೆ ಮಂಗಳೂರು ಮತ್ತು ಬೆಂಗಳೂರು ನಡುವೆ ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ವೈಜ್ಞಾನಿಕ ಅಭಿವೃದ್ಧಿ ಯೋಜನೆಯ ಕನಸಿದೆ. ಒಟ್ಟಿನಲ್ಲಿ ಇಡೀ ಕರ್ನಾಟಕದ ಅಭಿವೃದ್ಧಿಯಲ್ಲಿ ದ.ಕ. ಜಿಲ್ಲೆ ಪಾತ್ರ ವಹಿಸಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇನ್ನು ಚುನಾವಣೆಗೆ ಕೆಲವೇ ದಿನಗಳೇ ಬಾಕಿ ಉಳಿದಿವೆ. ಆದ್ದರಿಂದ ಕಾರ್ಯಕರ್ತರು ಚುನಾವಣೆಯವರೆಗೆ ವಿರಮಿಸದೆ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ನಿಟ್ಡಿನಲ್ಲಿ ಹಗಲಿರುಲು ದುಡಿಯಬೇಕಿದೆ. ನರೇಂದ್ರ ಮೋದಿಯವರು ಹೇಳಿದ್ದನ್ನು ಮಾಡಿ ತೋರಿಸಿದ್ದು, ಅವರು ಜಾರಿಗೆ ತಂದ ಯೋಜನೆಗಳನ್ನು ಜನಸಾಮನ್ಯರಿಗೆ ತಲುಪಿಸೋಣ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್ ಅವರು ಮಾತನಾಡಿ, ಭಾರತದಲ್ಲಿ ಸುಮಾರು ೮೩೭ ಯೋಜನೆಗಳನ್ನು ದೇಶದ ಜನರಿಗೆ ಕೊಟ್ಟ ವ್ಯಕ್ತಿ ಎಂದರೆ ಅದರು ನರೇಂದ್ರ ಮೋದಿ. ಅವರು ವ್ಯಕ್ತಿ ಮಾತ್ರವಲ್ಲ ಶಕ್ತಿಯಾಗಿದ್ದಾರೆ. ನರೇಂದ್ರ ಮೋದಿಯವರ ಚಿಂತನೆಯ ಪ್ರಭಾವದಿಂದ ಕಾಶ್ಮೀರದಲ್ಲಿ ಕಲ್ಲು ಎಸೆಯುತ್ತಿದ್ದ ಯುವಕರು ಇಂದು ಲ್ಯಾಪ್‌ಟಾಪ್ ಹಿಡಿದು ಕೆಲಸ ಮಾಡುತ್ತಿದ್ದಾರೆ. ಈ ಜಿಲ್ಲೆಯಲ್ಲಿ ಆಸ್ಕರ್ ಫರ್ನಾಂಡೀಸ್, ವೀರಪ್ಪಮೊಯಿಲಿ ಅವರು ಕಾಂಗ್ರೆಸ್ ನಲ್ಲಿದ್ದರೂ ದ.ಕ.ಜಿಲ್ಲೆ ಯಾವುದೇ ಅಭಿವೃದ್ಧಿ ಕಂಡಿಲ್ಲ. ಆದರೆ ಮೋದಿಪ್ರದಾನಿಯಾದ ಬಳಿಕ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳು ಹರಿದುಬಂದಿದೆ ಎಂದರು.
ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚುನಾವಣಾ ನಿರ್ವಾಹಣಾ ಪ್ರಮುಖರಾದ ನಿತಿನ್ ಕುಮಾರ್, ಮಾಜಿ ಶಾಸಕ ಜಯರಾಮ ಶೆಟ್ಟಿ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ದಿನೇಶ್ ಅಮ್ಟೂರು, ದೇವದಾಸ, ಪ್ರಧಾನಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಯತೀಶ್ ಆಳ್ವ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್‌ನ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಹಿರಿಯರಾದ ರಾಜಾರಾಂ ಭಟ್, ಪ್ರವಾಸ ಪ್ರಮುಖರಾದ ದೇವದಾಸ ಶೆಟ್ಡಿ ಬಂಟ್ವಾಳ, ಚುನಾವಣಾ ಪ್ರಭಾರಿ ರಾಧಾಕೃಷ್ಣ ಬೋಡಿಯಾರ್, ಮಹಿಳಾ ಸಂಚಾಲಕಿ ಧನಲಕ್ಷ್ಮೀ ಗಟ್ಟಿ, ಜಯಶ್ರೀ ಕರ್ಕೇರ, ಹಿರಿಯರಾದ ಸೀತಾರಾಂ ಬಂಗೇರ, ಸತೀಶ್ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.
ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಚಂದ್ರಹಾಸ್ ಪಂಡಿತ್ ಹೌಸ್ ಸ್ವಾಗತಿಸಿ, ಬಿಜೆಪಿ ಮಾಧ್ಯಮ ಪ್ರಮುಖರಾದ ಜೀವನ್ ತೊಕ್ಕೊಟ್ಟು ಕಾರ್ಯಕ್ರಮ ನಿರೂಪಿಸಿದರು.