Moodubidire: ವಾಲ್ಪಾಡಿಯಲ್ಲಿ 'ವಾತ್ಸಲ್ಯ' ಮನೆ ಹಸ್ತಾಂತರ
Monday, March 18, 2024
ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಮೂಡುಬಿದಿರೆ ತಾಲೂಕು ವಾಲ್ಪಾಡಿ ಕಾರ್ಯ ಕ್ಷೇತ್ರದಲ್ಲಿ ಚಂದ್ರವತಿ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಟ್ರಸ್ಟಿ ಸಂಪತ್ ಸಾಮ್ರಾಜ್ಯ ಅವರು ಉದ್ಘಾಟಿಸಿ ಮನೆಯನ್ನು ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು, ಗ್ರಾಮಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ನಿರ್ಗತಿಕರಿಗೆ ವಾಸಿಸಲು ಮನೆಯ ವ್ಯವಸ್ಥೆ ಯನ್ನು ಮಾಡಿಕೊಡುತ್ತಿರುವುದು ಬಹಳ ಪುಣ್ಯದ ಕೆಲಸ. ಚಂದ್ರವತಿ ಅವರ ಜೀವನ ಇನ್ನೂ ಉತ್ತಮ ರೀತಿಯಲ್ಲಿ ಬೆಳಗಲಿ ಎಂದು ಶುಭ ಹಾರೈಸಿದರು.
ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಅವರು ಮಾತನಾಡಿ ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ, ಸದಸ್ಯರಾದ ಅರುಣ್, ಗಣೇಶ, ಶ್ರೀಧರ್ ಬಂಗೇರ, ಜನಜಾಗ್ರತಿಯ ಸದಸ್ಯರಾದ ಲಕ್ಷ್ಮಣ್ ಸುವರ್ಣ ತಾಲೂಕಿನ ಯೋಜನಾಧಿಕಾರಿ, ಸುನೀತಾ, ಉಡುಪಿ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ಅಮೃತಾ, ತಾಲೂಕಿನ ಸಮನ್ವಯಧಿಕಾರಿ, ವಿದ್ಯಾ, ವಲಯ ಮೇಲ್ವಿಚಾರಕಿಯರಾದ ಶಿವ ಲಕ್ಷ್ಮಿ, ಜಿಲ್ಲಾ ವಿಮಾ ಸಮನ್ವಯಧಿಕಾರಿ ಹೇಮಲತಾ ಹೆಗ್ಡೆ ಸೇವಾಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಊರಿನ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
