Mangalore: ನಿಟ್ಟೆ ಮೀನಾಕ್ಷಿ ಹೆಗ್ಡೆ ಸ್ಮಾರಕ ಟ್ರೋಫಿ-ಥ್ರೋಬಾಲ್ ಪಂದ್ಯಾವಳಿಯಲ್ಲಿ ಎಸ್‌ಜೆಇಸಿ ಮಹಿಳಾ ಥ್ರೋಬಾಲ್ ತಂಡಕ್ಕೆ ಪ್ರಶಸ್ತಿ
Monday, March 18, 2024
ಮಂಗಳೂರು: ಮಂಗಳೂರಿನ ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಕ್ರೀಡಾ ತಂಡವು ಇತ್ತೀಚೆಗೆ ನಡೆದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಎಸ್‌ಜೆಇಸಿ ಮಹಿಳಾ ಥ್ರೋಬಾಲ್ ತಂಡವು ಮಾ.೧೫ ರಂದು ಎನ್.ಎಂ.ಎ.ಎಂ.ಐ.ಟಿ. ನಿಟ್ಟೆಯಲ್ಲಿ ನಡೆದ ನಿಟ್ಟೆ ಮೀನಾಕ್ಷಿ ಹೆಗ್ಡೆ ಸ್ಮಾರಕ ಟ್ರೋಫಿ ಥ್ರೋಬಾಲ್ ಪಂದ್ಯಾವಳಿಯಲ್ಲಿ ವಿಜೇತರಾಗಿ ಹೊರಹೊಮ್ಮಿತು.
ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿನಿ ನಿಶಾ ವಾಲ್ರಿ ಅರಾನ್ಹಾ ಅವರು ಪಂದ್ಯದ ಅತ್ಯುತ್ತಮ ಥ್ರೋವರ್ ಪ್ರಶಸ್ತಿ ಹಾಗೂ ಕೊನೆಯ ವರ್ಷದ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ರೋಜಾ ಎಸ್. ಪಂದ್ಯಾವಳಿಯ ಅತ್ಯುತ್ತಮ ರಿಸೀವರ್ ಪ್ರಶಸ್ತಿ ಪಡೆದರು. ಈ ಸಾಧನೆಗಾಗಿ ಎಸ್.ಜೆ.ಇ.ಸಿ. ಆಡಳಿತ ಮಂಡಳಿ ಮಹಿಳಾ ಥ್ರೋಬಾಲ್ ತಂಡ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರನ್ನು ಅಭಿನಂದಿಸುತ್ತದೆ.
