Mangalore: ತರಗತಿ ಪ್ರತಿನಿಧಿಗಳಿಗಾಗಿ ನಾಯಕತ್ವ ತರಬೇತಿ ಕಾರ್ಯಾಗಾರ

Mangalore: ತರಗತಿ ಪ್ರತಿನಿಧಿಗಳಿಗಾಗಿ ನಾಯಕತ್ವ ತರಬೇತಿ ಕಾರ್ಯಾಗಾರ


ಮಂಗಳೂರು: ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತರಗತಿ ಪ್ರತಿನಿಧಿಗಳಿಗಾಗಿ ಒಂದು ದಿನದ ನಾಯಕತ್ವ ತರಬೇತಿ ಕಾರ್ಯಾಗಾರವು ಜೆಸಿಐ ಮಂಗಳೂರು ಇದರ ಸಹಯೋಗದೊಂದಿಗೆ ಮಾ.12 ರಂದು ನಡೆಯಿತು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಎಂ. ಇವರು ವಹಿಸಿದರು. ಜೆಸಿಐ ಮಂಗಳೂರು ಇದರ ಅಧ್ಯಕ್ಷ ಶುಶಾಂತ್ ರಾಮಾನುಜಂ, ನಿಕಟ ಪೂರ್ವ ಅಧ್ಯಕ್ಷ ಅರುಣ್ ಪಿಂಟೋ, ಐಕ್ಯೂಎಸಿ ಸಹ ಸಂಯೋಜಕಿ ಡಾ. ಜ್ಯೋತಿಪ್ರಿಯಾ ಮತ್ತು ಕಾರ್ಯಕ್ರಮದ ಸಂಯೋಜಕ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಟಿ ಸುಧಾಕರನ್ ಉಪಸ್ಥಿತರಿದ್ದರು.

ವಿದ್ಯಾರ್ಥಿ ವೇದಿಕೆ ಕಾರ್ಯದರ್ಶಿ ಕವನ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ವೇದಿಕೆ ಅಧ್ಯಕ್ಷೆ ಚೈತ್ರ ಕೆ. ಸ್ವಾಗತಿಸಿ, ಉಪಾಧ್ಯಕ್ಷ ಈರೇಶ್ ವಂದಿಸಿದರು. ಬಳಿಕ ಮಂಗಳೂರಿನ ಜೆಸಿಐ ತರಬೇತುದಾರ ದೀರಜ್ ಬಿ. ಉದ್ಯಾವರ್ ಅವರು ತರಗತಿ ಪ್ರತಿನಿಧಿಗಳಿಗೆ ನಾಯಕತ್ವ ತರಬೇತಿ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article