Chiikkamagaluru: ಹೋಂ ಸ್ಟೇ/ ರೆಸಾರ್ಟ್‌ಗಳಲ್ಲಿ ಏಪ್ರಿಲ್ 25,26 ರಂದು ಬುಕ್ಕಿಂಗ್ ಸ್ವೀಕರಿಸುವಂತಿಲ್ಲ
Monday, April 15, 2024
ಚಿಕ್ಕಮಗಳೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ರ ಮತದಾನವು ಜಿಲ್ಲೆಯಲ್ಲಿ ಹಾಗೂ ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಏಪ್ರಿಲ್ 26 ರಂದು ಜರುಗಲಿದ್ದು, ಯಾವೊಬ್ಬ ಮತದಾರನು ಮತದಾನದಿಂದ ಹೊರಗುಳಿಯಬಾರದು ಮತ್ತು ಪ್ರತಿಯೊಂದು ಮತವು ಅತ್ಯಮೂಲ್ಯ ಎಂಬ ತಾತ್ವಿಕ ನೆಲೆಗಟ್ಟಿನಡಿ ಏಪ್ರಿಲ್ 26 ರಂದು ಶೇ.100 ರಷ್ಟು ಮತದಾನ ಆಗುವಂತೆ ನೋಡಿಕೊಳ್ಳುವುದು ಜಿಲ್ಲಾ ಚುನಾವಣಾಧಿಕಾರಿಗಳ ಕರ್ತವ್ಯವಾಗಿರುತ್ತದೆ.
ರಾಜ್ಯದಲ್ಲಿ ಶೇ.100 ರಷ್ಟು ಮತದಾನ ಮಾಡಿಸುವ ನಿಟ್ಟಿನಲ್ಲಿ ಏಪ್ರಿಲ್ 25 ಹಾಗೂ ಏಪ್ರಿಲ್ 26 ರಂದು ಬೇರೆ ಬೇರೆ ಜಿಲ್ಲೆಯ ಪ್ರವಾಸಿಗರನ್ನು ಹೋಂ ಸ್ಟೇ/ ರೆಸಾರ್ಟ್‌ಗಳಲ್ಲಿ ಬುಕ್ಕಿಂಗ್ ಸ್ವೀಕರಿಸದೆ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯನ್ನು ಯಶ್ವಸಿಗೊಳಿಸಲು ಜಿಲ್ಲಾಡಳಿತದೊಂದಿಗೆ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳ ಮಾಲೀಕರು ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.