Karkala: ನೊಟಾ ಮತ ಚಲಾವಣೆಗೆ ಆಗ್ರಹ: ಸುಧಾಕರ ರಾವ್
ಕಾರ್ಕಳ: ಹನ್ನೊಂದು ವರ್ಷ ಕಳೆದರು ಕೂಡ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ನ್ಯಾಯ ಸಿಕ್ಕಿಲ್ಲ. ಯಾವ ಜನಪ್ರತಿನಿಧಿಯು ಕೂಡ ಸ್ಪಂದಿಸುತಿಲ್ಲ. ನನಗೆ ಚುನಾಯಿತ ಜನಪ್ರತಿನಿದಿಗಳ ಮೇಲೆ ನಂಬಿಕೆಯಿಲ್ಲ. ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಕೂಡ ಸಾಂತ್ವಾನ ಮಾಡಲು ಬಂದಿಲ್ಲ. ನನ್ನ ಕುಟುಂಬಕ್ಕೆ ಅನ್ಯಾಯವಾಗಿದೆ. ಈ ಬಾರಿ ಚುನಾವಣೆಯಲ್ಲಿ ನೋಟಾಕ್ಕೆ ಬೆಂಬಲ ವ್ಯಕ್ತ ಪಡಿಸಿ ಆ ಮೂಲಕ ನಮಗೆ ನ್ಯಾಯ ಒದಗಿಸಿ ಸೌಜನ್ಯ ಪ್ರಕರಣದ ನಿರ್ದೋಷಿ ಸಂತೋಷ್ ರಾವ್ ಅವರ ತಂದೆ ಸುಧಾಕರ ರಾವ್ ಹೇಳಿದರು.
ಅವರು ಕಾರ್ಕಳ ಪ್ರಕಾಶ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಪ್ಠಿಯಲ್ಲಿ ಮಾತನಾಡಿದರು.
ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ನಂಬಿಕೆಯಿದೆ. ಆದರೆ ಹೆಣ್ಣು ಮಗಳಿಗೆ ನ್ಯಾಯ ಸಿಗಲೆಬೇಕು ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ತಮ್ಮಣ್ಣ ಶೆಟ್ಟಿ ಮಾತನಾಡಿ, ಪುತ್ತೂರು ಅಕ್ಷತಾ, ಹೆಬ್ರಿಯ ಸುಚೇತ ಕೊಲೆ, ಮೂಲಕ ಕೆಲವೊಂದು ಮಂದಿ ಶಾಸಕ ಸಂಸದರಾದರು. ಧರ್ಮದ ಹೆಸರಿನಲ್ಲಿ ಮತ ಪಡೆದವರು ಶ್ರೀಯರಿಗೆ ಅನ್ಯಾಯ ಆದಾಗ ಚಕಾರ ಎತ್ತಲಿಲ್ಲ. ಕೇವಲ ಕಾಮಾಂಡರ ಬೆನ್ನ ಹಿಂದೆ ನೆರಳಾಗಿ ಅವರ ಬೆಂಬಲಕ್ಕೆ ನಿಂತರು ಹುಬ್ಬಳ್ಳಿಯ ನೇಹಾ ಪ್ರಕರಣಗಳಿಂದ ಜನಪ್ರತಿನಿಧಿಗಳು ರಾಜಕೀಯ ಲಾಭ ಪಡೆದರು. ಸೌಜನ್ಯ ಅತ್ಯಾಚಾರ ಪ್ರಕರಣ, ವೇದವಲ್ಲಿ ಕೊಲೆ ಪ್ರಕರಣ, ಮಾವುತನ ಕೊಲೆಯಲ್ಲೂ ನ್ಯಾಯ ಸಿಗಲಿಲ್ಲ. ಯಾವ ಜನಪ್ರತಿನಿಧಿಗಳು ಕೂಡ ಸ್ಪಂದಿಸಲಿಲ್ಲ. ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಮತ ಪಡೆಯುವುದೆ ರಾಜಕೀಯ ಪಕ್ಷಗಳ ಕಾಯಕವಾಗಿದೆ. ಈ ಬಾರಿ ನೋಟಾಕ್ಕೆ ಮತವನ್ನು ಚಲಾಯಿಸೋಣ. ಎಂದರು.
ಸುಧಾಕರ್ ರಾವ್ ಸಹೋದರ ಸಂಜಯ್ ರಾವ್, ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿ ದಿನೇಶ್ ಗಣಿಗ, ವಿನಯ್ ಬಜೆಗೋಳಿ, ಸದಾನಂದ ನಿಟ್ಟೆ ಉಪಸ್ಥಿತರಿದ್ದರು.