Mangalore: ಶಕ್ತಿ ಪ.ಪೂ. ಕಾಲೇಜ್‌ನ ದ್ವಿತೀಯ ಪ.ಪೂ. ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗಕ್ಕೆ 100ಶೇ. ಮತ್ತು ವಾಣಿಜ್ಯ ವಿಭಾಗದಲ್ಲಿ97.2ಶೇ. ಫಲಿತಾಂಶ
ಮಂಗಳೂರು: ಶಕ್ತಿನಗರದ ಶಕ್ತಿ ಪ.ಪೂ. ಕಾಲೇಜಿನ ದ್ವಿತೀಯ ಪ.ಪೂ. ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 100ಶೇ. ಹಾಗೂ ವಾಣಿಜ್ಯ ವಿಭಾಗದಲ್ಲಿ97.2ಶೇ. ಫಲಿತಾಂಶ ಬಂದಿರುತ್ತದೆ. ವಾಣಿಜ್ಯ ವಿಭಾಗದ ಅರ್ಚನ ಎನ್.ಕೆ. 593 ಅಂಕವನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 5ನೇ ರ್‍ಯಾಂಕ್ ಹಾಗೂ ವಿಜ್ಞಾನ ವಿಭಾಗದ ರೋಹಿತ್ ಕಲ್ಲೂರಾಯ 589 ಅಂಕ ಪಡೆಯುವುದರ ಮೂಲಕ ರಾಜ್ಯದ 10ನೇ ರ್‍ಯಾಂಕ್ ಪಡೆದಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದಿರುವ ಒಟ್ಟು 211 ವಿದ್ಯಾರ್ಥಿಗಳಲ್ಲಿ 211 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. 129 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 79 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.
ವಿಜ್ಞಾನ ವಿಭಾಗದ ಪಿಸಿಎಮ್‌ಸಿಯಲ್ಲಿ ರೋಹಿತ್ ಕಲ್ಲೂರಾಯ 589 ಅಂಕ, ಪಿಸಿಎಂಬಿಯಲ್ಲಿ ಮೌನ ಜಿ. 585, ಪಿ.ಸಿ.ಎಂ.ಸಿ.ಯ ಪ್ರತಿಕ್ಷಾ ಬಿ.ಪಿ. 584, ದೇವಿಕಾ ಸಿ.ಪೈ 584, ಸ್ವಪ್ನ 581, ಕಾವ್ಯ ಡಿ. ಮಾರ್ಲ 581, ಕಾರ್ತಿಕ್ ಎಚ್.ಎಸ್. 580, ಮಿಥಾಲಿ ಆರ್. ಅಮಿನ್ 579, ಎನ್. ಹಿತೇಶ್ ಕುಮಾರ್ 578, ಪ್ರಥಮೇಶ್ ಶೆಣೈಕುಡ್ಪಿ577, ವಂಶಿ ಎಚ್.ಆರ್. 575 ಅಂಕಗಳಿಸಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಒಟ್ಟು 68 ವಿದ್ಯಾರ್ಥಿಗಳಲ್ಲಿ 66 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. 20 ವಿಶಿಷ್ಟ ಶ್ರೇಣಿ, 36 ಪ್ರಥಮ ಶ್ರೇಣಿಯಲ್ಲಿ 08 ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ವಾಣಿಜ್ಯ ವಿಭಾಗದ ಎಸ್‌ಇಬಿಎ.ಯ ಅರ್ಚನ ಎನ್.ಕೆ. ೫೯೩ ಅಂಕ ಮತ್ತು ಸಿಇಬಿಎ.ಯ ನಿಹಾರೀಕ ಕೆ.ಆರ್. ೫೮೬ ಅಂಕಗಳಿಸಿದ್ದಾರೆ.
ಶಕ್ತಿ ಪಪೂ ಕಾಲೇಜು ತನ್ನ ಐದನೇ ವರ್ಷದಲ್ಲಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ತೋರಿರುವುದನ್ನು ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ. ನಾಕ್, ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾಕ್, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪಪೂ ಕಾಲೇಜು ಪ್ರಾಂಶುಪಾಲ ವೆಂಕಟೇಶ ಮೂರ್ತಿ ಎಚ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲ ಬಬಿತಾ ಸೂರಜ್‌ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಅಭಿನಂದಿಸಿದ್ದಾರೆ.