Mangalore: ಎ.15, 16, 17: 85 ವರ್ಷ ಮೇಲ್ಪಟ್ಟವರಿಗೆ ಮತದಾನ

Mangalore: ಎ.15, 16, 17: 85 ವರ್ಷ ಮೇಲ್ಪಟ್ಟವರಿಗೆ ಮತದಾನ

ಮಂಗಳೂರು: ಎ.15, 16 ಮತ್ತು 17 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆಯ ತನಕ 85 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆ-ಮನೆಯಲ್ಲಿ ಮತದಾನ ನಡೆಯಲಿದೆ. ಈ ಸಂದರ್ಭದಲ್ಲಿ ಅವರು ಮನೆಯಲ್ಲಿಯೇ ಇದ್ದು ಸಹಕರಿಸಬೇಕು ಎಂದು 203-ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಗಿರೀಶ್ ನಂದನ್ ಎಂ. ತಿಳಿಸಿದರು.

ಅವರು ಎ.14 ರಂದು ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಚುನಾವಣಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 1401 ಜನ ಮತದಾನ ಮಾಡಲಿದ್ದು, 1310 ಮಂದಿ 85 ವರ್ಷ ಮೇಲ್ಪಟ್ಟವರು ಹಾಗೂ 91 ಮಂದಿ ವಿಕಲಚೇತನರು ಮತದಾನ ಮಾಡಲಿದ್ದಾರೆ ಎಂದರು.

ಈ ಚುನಾವಣೆಗೆ 30-40 ಮತದಾರರ ತಂಡವನ್ನು ಮಾಡಲಾಗಿದ್ದು, ಈ ತಂಡದೊಂದಿಗೆ ಪ್ರತಿಯೊಂದು ಪಾರ್ಟಿಯ ಓರ್ವ ವೀಕ್ಷಕರಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಯಾವ ಕಡೆಯಲ್ಲಿ 100 ಮಂದಿಗಿಂತ ಹೆಚ್ಚು ಮತದಾರರಿದ್ದಾರೆ ಆ ಕಡೆಗಳಿಗೆ ಪಿಆರ್‌ಓ, ಎಆರ್‌ಓ ಹಾಗೂ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ಹೇಳಿದರು.

ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 2,52,583 ಮಂದಿ ಮತದಾರರಿದ್ದು, 1,20,575 ಮಂದಿ ಪುರುಷರು, 1,31,958 ಮಹಿಳಾ ಮತದಾರರು, 50 ಮಂದಿ ತೃತೀಯ ಲಿಂಗಿಯರು ಮತದಾರರು ಇದ್ದಾರೆ.

2 ಸೂಕ್ಷ್ಮ ಮತ ಕೇಂದ್ರ:

99-ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಸಬ ಬೆಂಗ್ರೆ ಹಾಗೂ 197- ಅಂಗನವಾಡಿ ಕೇಂದ್ರ ವೀರನಗರ, ಪಡೀಲ್ ಮತಕೇಂದ್ರವನ್ನು ಸೂಕ್ಷ್ಮ ಮತಕೇಂದ್ರ ಎಂದು ಗುರುತಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article