Mangalore: ಎ.17: ವೈಭವದ ಶ್ರೀ ರಾಮೋತ್ಸವ

Mangalore: ಎ.17: ವೈಭವದ ಶ್ರೀ ರಾಮೋತ್ಸವ

ಮಂಗಳೂರು: ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ಅವತರಿಸಿದ ಪುಣ್ಯ ದಿನವಾದ ಶ್ರೀ ರಾಮನವಮಿಯನ್ನು ವಿಶ್ವ ಹಿಂದೂ ಪರಿಷದ್ ಆಶ್ರಯದಲ್ಲಿ ಎ.17 ರಂದು ಮಂಗಳೂರು ವಿಶ್ವ ಹಿಂದೂ ಪರಿಷದ್ ಕಾರ್ಯಾಲಯ ವಿಶ್ವಶ್ರೀ ಕದ್ರಿಯಲ್ಲಿ 23ನೇ ವರ್ಷದ ಶ್ರೀ ರಾಮೋತ್ಸವ ವೈಭವದಲ್ಲಿ  ಆಚರಿಸಲಾಗುವುದು. ಶ್ರೀ ಸೀತಾಮಾತೆ ಲಕ್ಷ್ಮಣ ಹನುಮಂತ ದೇವರ ಪ್ರತಿಷ್ಠೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಾಂಸ್ಕೃತಿಕ ಕಾರ್ಯಕ್ರಮಗಳು 3 ದಿನಗಳ ಕಾಲ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷತ್ ಪ್ರಕಟಣೆಯಲ್ಲಿ ತಿಳಿಸಿದೆ.

ಧಾರ್ಮಿಕ ಕಾರ್ಯಕ್ರಮಗಳು ಎ.17 ರಂದು ಬೆಳಿಗೆ ವಿಶ್ವ ಹಿಂದೂ ಪರಿಷದ್ ಕಾರ್ಯಾಲಯದಲ್ಲಿ ಶ್ರೀ ದೇವರ ವಿಗ್ರಹವು ವೇ.ಮೂ. ಗಿರಿಧರ್ ಭಟ್ ಪೌರೋಹಿತ್ಯದಲ್ಲಿ ಪ್ರತಿಷ್ಠಾಪನ ಮತ್ತು ಗಣಪತಿಹೋಮ, ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಧ್ವಜಾರೋಹಣ, ಗೋಪೂಜೆ, ಮಧ್ಯಾಹ್ನ ಮಹಾಪೂಜೆ, ಪುಸಾದ ವಿತರಣೆ ಮತ್ತು ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ.

ವಿವಿಧ ಭಜನಾ ತಂಡಗಳಿಂದ ಬೆಳಿಗಿನಿಂದ ಸಂಜೆಯವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ. ರಾಮೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಸದ್ಭಕ್ತ ಬಾಂಧವರೆಲ್ಲರೂ  ಸಕುಟುಂಬಿಕರಾಗಿ ಪಾಲ್ಗೊಂಡು ತ್ರಿಕರಣಪೂರ್ವಕ ಸೇವೆ ಸಲ್ಲಿಸಿ, ಪಭು ಶ್ರೀರಾಮಚಂದ್ರನ ಅನುಗ್ರಹವನ್ನು ಪಡೆಯಬಹುದಾಗಿದೆ. ವಿಶ್ವ ಹಿಂದೂ ಪರಿಷತ್ತಿನ  ಮಂಗಳೂರು ಮಹಾನಗರ ಎಲ್ಲಾ ಸಮಿತಿಗಳಲ್ಲಿ ರಾಮೋತ್ಸವ ಅಯೋಧ್ಯೆಯಲ್ಲಿ ಪಭು ಶ್ರೀರಾಮಚಂದ್ರ ದೇವರ ಪ್ರತಿಷ್ಠೆಗೊಂಡಿದ್ದು, ಆ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ತಿನ ಮಂಗಳೂರು ಮಹಾನಗರ 164 ಸಮಿತಿಗಳಲ್ಲಿ ರಾಮೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷತ್ ಪ್ರಕಟಣೆಯಲ್ಲಿ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article