Mangalore: 7,807 ಮಂದಿಯಿಂದ ಮನೆಯಲ್ಲೇ ಮತದಾನ
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮನೆಯಿಂದಲೇ ಮತದಾನ ಮಾಡಲು ಹೆಸರು ನೋಂದಾಯಿಸಿಕೊಂಡ 8,010 ಮಂದಿಯಲ್ಲಿ 5,878ಮಂದಿ 85 ವರ್ಷ ಮೇಲ್ಪಟ್ಟವರು ಮತ್ತು 1929 ಮಂದಿ ವಿಶೇಷ ಚೇತನರು ಮನೆಯಿಂದಲೇ ಮತ ಚಲಾಯಿಸಿದ್ದಾರೆ. ಈ ಮೂಲಕ ಒಟ್ಟು 7,807 ಮಂದಿ ಮನೆಯಿಂದಲೇ ಮತ ಚಲಾಯಿಸಿದಂತಾಗಿದೆ.
ಈ ಚುನಾವಣೆಯಲ್ಲಿ 137 ಮಂದಿ ಆ ಬಾರಿ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಈ ಪೈಕಿ ಓರ್ವ ಮತದಾರರು ಮತದಾನ ಪ್ರಕ್ರಿಯೆ ಸಂದರ್ಭ ಮತದಾನಕ್ಕೆ ನಿರಾಕರಿಸಿದ್ದಾರೆ. ಮನೆಯಿಂದ ಮತದಾನದ ಮಾಡಲು ಹೆಸರು ನೋಂದಾಯಿಸಿಕೊಂಡಿದ್ದ 136 ಮಂದಿ ಚುನಾವಣಾ ಅಧಿಕಾರಿಗಳು ಎರಡು ಬಾರಿ ಮನೆಗೆ ತೆರಳಿದ ಸಂದರ್ಭ ಮನೆಗಳಲ್ಲಿ ಇಲ್ಲದೇ ಇದ್ದುದರಿಂದ ಅವರು ಮತದಾನದ ಹಕ್ಕಿನಿಂದ ವಂಚಿತರಾದಂತಾಗಿದೆ.
ಎಲ್ಲಿ ಎಷ್ಟು ಮತದಾನ:
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 623 ಮತದಾರರಲ್ಲಿ 602 ಮಂದಿ ಮತ ಚಲಾಯಿಸಿದ್ದರೆ, 352 ವಿಕಲಚೇತನ ಮತದಾರರಲ್ಲಿ 347 ಮಂದಿ ಮತದಾನ ಮಾಡಿದ್ದಾರೆ. ಕ್ಷೇತ್ರದಲ್ಲಿ ಮತದಾನದ ಅರ್ಹತೆ ಪಡೆದ ಪಟ್ಟಿಯಲ್ಲಿದ್ದ 9 ಮಂದಿ ಮೃತರಾಗಿದ್ದಾರೆ. ಕ್ಷೇತ್ರದಲ್ಲಿ 17 ಮಂದಿ ಮತದಾರರು ಮತದಾನ ಪ್ರಕ್ರಿಯೆ ವೇಳೆ ಮನೆಯಲ್ಲಿ ಲಭ್ಯವಾಗಿಲ್ಲ.
ಬೆಳ್ತಂಗಡಿಯಲ್ಲಿ 85 ವರ್ಷ ಮೇಲ್ಪಟ್ಟ 573 ಮತದಾರರಲ್ಲಿ 548 ಹಾಗೂ ವಿಕಲಚೇತನ 239 ಮತದಾರರಲ್ಲಿ 234 ಮಂದಿ ಮತದಾನ ಮಾಡಿದ್ದು, 4 ಮಂದಿ ಮೃತಪಟ್ಟಿದ್ದಾರೆ. 26 ಮಂದಿ ಮತದಾನ ಪ್ರಕ್ರಿಯೆ ಸಂದರ್ಭ ಲಭ್ಯವಾಗಿಲ್ಲ. ಮಂಗಳೂರು ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 351 ಮತದಾರರಲ್ಲಿ 338 ಮಂದಿ ಹಾಗೂ 164 ವಿಕಲಚೇತನ ಮತದಾರರಲ್ಲಿ 162 ಮಂದಿ ಮತದಾನ ಮಾಡಿದ್ದು, 5 ಮಂದಿ ಮೃತಪಟ್ಟಿದ್ದಾರೆ. 10 ಮಂದಿ ಮತದಾನ ಪ್ರಕ್ರಿಯೆ ವೇಳೆ ಲಭ್ಯರಾಗಿಲ್ಲ.
ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 794 ಮತದಾರರಲ್ಲಿ 776 ಮಂದಿ, 181 ವಿಕಲಚೇತನರಲ್ಲಿ 179 ಮಂದಿ ಮತದಾನ ಮಾಡಿದ್ದಾರೆ. 7 ಮಂದಿ ಮತದಾರರು ಮೃತರಾಗಿದ್ದು, 14 ಮಂದಿ ಮತದಾನದ ಅರ್ಹತೆ ಕಳೆದುಕೊಂಡಿದ್ದಾರೆ. ಮಂಗಳೂರು ನಗರ ದಕ್ಷಿಣದಲ್ಲಿ 85 ವರ್ಷ ಮೇಲ್ಪಟ್ಟ 1310 ಮತದಾರರಲ್ಲಿ 1275 ಮಂದಿ ಹಾಗೂ 91 ವಿಕಲಚೇತನರಲ್ಲಿ 90 ಮಂದಿ ಮತದಾನ ಮಾಡಿದ್ದು, 12 ಮಂದಿ ಮೃತಪಟ್ಟಿದ್ದಾರೆ. 23 ಮಂದಿ ಮತದಾನದಿಂದ ವಂಚಿತರಾಗಿದ್ದಾರೆ. ಮೂಡಬಿದಿರೆ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 913 ಮತದಾರರಲ್ಲಿ 890 ಮಂದಿ ಹಾಗೂ 253 ವಿಕಲಚೇತನರಲ್ಲಿ 248 ಮಂದಿ ಮತದಾನಗೈದಿದ್ದಾರೆ. 8 ಮಂದಿ ಮೃತಪಟ್ಟಿದ್ದು, 20 ಮಂದಿ ಮತದಾನದ ಅರ್ಹತೆ ಕಳೆದುಕೊಂಡಿದ್ದಾರೆ. ಪುತ್ತೂರು ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 787 ಮತದಾರರಲ್ಲಿ 772 ಹಾಗೂ 340 ವಿಕಲಚೇತನರಲ್ಲಿ 337 ಮಂದಿ ಮತದಾನಗೈದಿದ್ದಾರೆ. 10 ಮಂದಿ ಮೃತಪಟ್ಟಿದ್ದು, 8 ಮಂದಿ ಮತದಾನದಿಂದ ಅರ್ಹತೆ ಕಳೆದುಕೊಂಡಿದ್ದಾರೆ.
ಸುಳ್ಯದಲ್ಲಿ 85 ವರ್ಷ ಮೇಲ್ಪಟ್ಟ 701 ಮತದಾರರಲ್ಲಿ 677 ಹಾಗೂ 337 ವಿಕಲಚೇತನರಲ್ಲಿ 332 ಮಂದಿ ಮತ ಚಲಾಯಿಸಿದ್ದು, 11 ಮಂದಿ ಮೃತಪಟ್ಟಿದ್ದಾರೆ. 18 ಮಂದಿ ಮತದಾನದಿಂದ ವಂಚಿತರಾಗಿದ್ದಾರೆ.