Mangalore: ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ರಂಜಾನ್ ಆಚರಣೆ
Thursday, April 11, 2024
ಮಂಗಳೂರು: ರಂಜಾನ್ ಹಬ್ಬವನ್ನು ‘ಈದುಲ್ ಫಿತ್ರ್’, ರಮದಾನ್, ರಮಜಾನ್ ಮತ್ತು ಈದ್ ಮುಬಾರಕ್ ಹೀಗೆ ಹಲವು ಹೆಸರುಗಳಿಂದ ಬೇರೆಬೇರೆ ಪ್ರದೇಶಗಳಲ್ಲಿ ಕರೆಯುವ ಮೂಲಕ ಈ ಹಬ್ಬವನ್ನು ಸರ್ವರೂ ಸಂಭ್ರಮದಿಂದ ಆಚರಿಸುತ್ತಾರೆ ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಉಸ್ತಾದ್ ರಪೀಕ್ ಖಾನ್ ಹೇಳಿದರು.
ಅವರು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಎಕ್ಸ್‌ಫೋಡಿಯಂ ಸಭಾಂಗಣದಲ್ಲಿ ನಡೆದ ‘ಈದುಲ್ ಫಿತ್ರ್’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮುಸ್ಲಿಮರೆಲ್ಲರು ಈ ಹಬ್ಬವನ್ನು 30 ದಿನಗಳ ಕಾಲ ಕಠಿಣವಾದ ಉಪವಾಸ ವೃತದ ಆಚರಣೆ ಮಾಡುವ ಮೂಲಕ ಸಹೋದರತ್ವ, ಕರುಣೆ, ಅನುಕಂಪ, ಪ್ರೀತಿ, ವಿಶ್ವಾಸ, ಆತ್ಮೀಯತೆಯನ್ನು ಗಳಿಸುವ ಮೂಲಕ ಕರ್ಮದಲ್ಲಿ ದೇವರನ್ನು ಕಾಣುತ್ತಾರೆ ಎಂದು ಹೇಳಿದರು.
ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್, ವಾಸ್ತುತಜ್ಞೆ ದೀಪಿಕಾ ಎ ಯಕ್, ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್ ಮತ್ತಿತರರು ಉಪಸ್ಥಿತರಿದ್ಧರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.





