Mangalore: ಕಂಕನಾಡಿ ವಲೆನ್ಸಿಯ ವಾರ್ಡಿನ ಬೂತ್ ಅಧ್ಯಕ್ಷರ ಸಭೆ
Saturday, April 13, 2024
ಮಂಗಳೂರು: ಕಂಕನಾಡಿ ವಲೆನ್ಸಿಯ ವಾರ್ಡಿನ ಬೂತ್ ಅಧ್ಯಕ್ಷರ ಸಭೆಯು ಗರೋಡಿ ಸರ್ವಮಂಗಳ ಹಾಲ್‌ನಲ್ಲಿ ಎ.12 ರಂದು ನಡೆಯಿತು. ದಕ್ಷಿಣ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಿಂ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಜೆ.ಆರ್. ಲೋಬೊ ಮಾತನಾಡಿ, ಕಾಂಗ್ರೆಸ್ ಪಕ್ಷ ಬೂತ್ ಮಟ್ಟದಲ್ಲಿ ಸಂಘಟನೆ ಮಾಡಬೇಕಾದ ಅವಶ್ಯಕತೆ ಇದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಖಂಡಿತವಾಗಿ ಅಧಿಕಾರ ಬರಲಿದೆ. ಬಿಜೆಪಿಯ ಅಧಿಕಾರ ನೋಡಿ ಜನ ರೋಸಿ ಹೋಗಿದ್ದಾರೆ. ಪಕ್ಷದ ಕಾರ್ಯಕರ್ತರು, ನಾಯಕರು ಪಕ್ಷದ ಗ್ಯಾರಂಟಿ ಕಾರ್ಡ್‌ಗಳನ್ನು ಮನೆ ಮನೆಗೆ ತಲುಪಿಸಿದ್ದಾರೆ ಎಂದರು.
ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ, ಪಕ್ಷದ ವಾರ್ಡ್ ಅಧ್ಯಕ್ಷ ಹೇಮಂತ್ ಗರೋಡಿ, ಪ್ರಮುಖರಾದ ಎಂ.ಜಿ. ಹೆಗ್ಡೆ, ಸದಾಶಿವ ಅಮೀನ್, ಆಶೀತ್ ಪಿರೇರಾ, ಚಂದ್ರಕಲಾ ಜೋಗಿ, ಸಭಿತಾ ಮಿಸ್ಕಿತ್, ರಮಾನಂದ ಪೂಜಾರಿ, ವೀಣಾ ಲೋಬೊ ಮತ್ತಿತರರು ಉಪಸ್ಥಿತರಿದ್ದರು.