Moodubidire: ಶ್ರೀಗಳಿಂದ ಮತದಾನ
Friday, April 26, 2024
ಮೂಡುಬಿದಿರೆ: ಶ್ರೀ ಕ್ಷೇತ್ರ ಕರಿಂಜೆಯ ಮುಕ್ತಾನಂದ ಸ್ವಾಮೀಜಿ ಅವರು ಮಧ್ಯಾಹ್ನದ ವೇಳೆ ಕಲ್ಲಬೆಟ್ಟು ಶಾಲೆಯಲ್ಲಿರುವ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.
ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಅವರು ಕೇಮಾರಿನ ಸರಕಾರಿ ಕಿ.ಪ್ರಾ. ಶಾಲೆಯಲ್ಲಿ ತಮ್ಮ ಮತವನ್ನು ಚಲಾಯಿಸಿದರು.
ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಬಳಿಕ ಮಾತನಾಡಿ, ದೇವರಿಗೆ ಪೂಜೆ ಮಾಡುವುದನ್ನು ಮತ್ತು ಓಟು ಹಾಕುವುದನ್ನು ಈವರೆಗೆ ಮರೆತಿಲ್ಲ. ಪೂಜೆ ಅಂತರಂಗವನ್ನು ಬಹಿರಂಗಗೊಳಿಸಿದರೆ, ಓಟು ನಮ್ಮ ದೇಶದ ಅಭಿವೃದ್ಧಿಗಾಗಿ ಆದ್ದರಿಂದ ಓಟು ಎನ್ನುವುದು ಪ್ರಜಾಪ್ರಭುತ್ವದ ಅಡಿಗಳ್ ಇದ್ದ ಹಾಗೆ ಎಂದ ಅವರು ಭವಿಷ್ಯವನ್ನು ನಿರ್ಧರಿಸುವುದು ಪೊಲಿಟಿಕ್ಸ್ ಆದ್ದರಿಂದ ನಾವು ಪೊಲಿಟಿಕ್ಸ್ ನ್ನು ನಿರ್ಧರಿಸಬೇಕೆಂದರು.
ಶ್ರೀ ಕ್ಷೇತ್ರ ಕರಿಂಜೆಯ ಮುಕ್ತಾನಂದ ಸ್ವಾಮೀಜಿ ಅವರು ಮಾತನಾಡಿ, ಅನ್ನದಾನದಷ್ಟೇ ಶ್ರೇಷ್ಠವಾದುದು ಮತದಾನ. ಈ ದೇಶದ ಭವಿಷ್ಯವನ್ನು ಪ್ರತಿನಿಧಿಸುವವರು ನಾವು ಆದ್ದರಿಂದ ಪ್ರತಿನಿಧಿಗಲಾಗಿರುವ ನಾವು ನಮ್ಮ ಹಕ್ಕನ್ನು ಚಲಾಯಿಸುವ ಮುಖಾಂತರ ದೇಶವನ್ನು ಸುಭದ್ರಗೊಳಿಸಬಹುದೆಂದರು.