Moodubidire: ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮೂಡುಬಿದಿರೆಯಲ್ಲಿ ಮತಯಾಚನೆ

Moodubidire: ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮೂಡುಬಿದಿರೆಯಲ್ಲಿ ಮತಯಾಚನೆ


ಮೂಡುಬಿದಿರೆ: ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರು ಮಂಗಳವಾರ ಸಂಜೆ ಮೂಡುಬಿದಿರೆ ಮಂಡಲ ವ್ಯಾಪ್ತಿಯಲ್ಲಿ ಮತಯಾಚಿಸಿದರು.

ಕಡಂದಲೆ ಸುಬ್ರಹ್ಮಣ್ಯ ದೇವಸ್ಥಾನ, ಬನ್ನಡ್ಕ ಎಸ್.ಕೆ.ಎಫ್. ಸಂಸ್ಥೆ, ಬೆಳುವಾಯಿ ನಡ್ಯೋಡಿ ಬ್ರಹ್ಮಕಲಶ, ಶಿರ್ತಾಡಿ ಅರ್ಜುನಾಪುರ ಮಹಾಲಿಂಗೇಶ್ವರ ದೇವಸ್ಥಾನ, ನೆಲ್ಲಿಕಾರು ಬಸದಿ, ಇರುವೈಲು ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಮೂಡುಬಿದಿರೆ ಪೇಟೆಯಲ್ಲಿ ಅಂಗಡಿಗಳಿಗೆ ತೆರಳಿ ಮತಯಾಚಿಸಿದರು.

ನಂತರ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಬ್ರಿಜೇಶ್ ಚೌಟ ಅವರು ಮೂಲ್ಕಿ-ಮೂಡುಬಿದಿರೆ ಮಂಡಲದಲ್ಲಿ ಇಂದು ಮತದಾರರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನರೇಂದ್ರ ಮೋದಿ ನಾಯಕತ್ವ ಮತ್ತು ಪಕ್ಷದ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ನಾವು ದ.ಕ.ಕ್ಷೇತ್ರದಲ್ಲಿ ಅತ್ಯಧಿಕ ಮತಗಳನ್ನು ಪಡೆಯುತ್ತೇವೆ ವಿಶ್ವಾಸವಿದೆ ಅಲ್ಲದೆ ದೇಶದಲ್ಲಿ 400ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಪಡೆದು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ ಎಂದು ಅಭಿಪ್ರಾಯಪಟ್ಟರು.

ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಕೆ.ಕೃಷ್ಣರಾಜ ಹೆಗ್ಡೆ, ಮೂಡಾದ ಮಾಜಿ ಅಧ್ಯಕ್ಷ ಮೇಘನಾಧ ಶೆಟ್ಟಿ, ಕ್ರೈಸ್ತ ನಿಗಮದ ಮಾಜಿ ಅಧ್ಯಕ್ಷ ಜೊಯ್ಲಸ್ ತಾಕೋಡೆ, ಮುಖಂಡರುಗಳಾದ ಕೆ. ಕೃಷ್ಣರಾಜ ಹೆಗ್ಡೆ, ಸುಕೇಶ್ ಶೆಟ್ಟಿ ಶಿರ್ತಾಡಿ, ಲಕ್ಷ್ಮಣ್ ಪೂಜಾರಿ, ಭರತ್ ಶೆಟ್ಟಿ, ಅಶ್ವತ್ಥ್ ಪಣಪಿಲ, ಸೂರಜ್ ಜೈನ್ ಮಾರ್ನಾಡ್, ಕೇಶವ ಕರ್ಕೇರಾ, ಅಜಯ್ ಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರುಗಳಾದ ರಾಜೇಶ್ ನಾಯ್ಕ್, ಸ್ವಾತಿ ಪ್ರಭು, ಶ್ವೇತಾಕುಮಾರಿ, ಜಯಶ್ರೀ, ಧನಲಕ್ಷ್ಮೀ, ದಿನೇಶ್ ಮಾರೂರು, ಶಾಂತಿ ಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article