Putturu: ಮಹಾಲಿಂಗೇಶ್ವರ ದೇವರ ಅವಭೃತ ಸವಾರಿ
Thursday, April 18, 2024
ಪುತ್ತೂರು: ಕಳೆದ ಎ.10ರಿಂದ ಆರಂಭಗೊಂಡ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವದಲ್ಲಿ ದೇವರು ಗುರುವಾರ ಪೂರ್ವ ಶಿಷ್ಟ ಸಂಪ್ರದಾಯದಂತೆ ವೀರಮಂಗಲದಲ್ಲಿರುವ ಕುಮಾರಧಾರಾ ನದಿ ತಟಾಕದಲ್ಲಿ ಅವಭೃತ ಸ್ನಾನಕ್ಕೆ ತೆರಳಿದರು.
ಅವಭೃತ ಸ್ನಾನದ ಸವಾರಿ ಸಂದರ್ಭದಲ್ಲಿ ದಾರಿಯುದ್ದಕ್ಕೂ ದೇವರಿಗೆ ಕಟ್ಟೆ ಪೂಜೆ ನಡೆಯಿತು. ದೇವಳದಿಂದ 15 ಕಿ.ಮೀ ದೂರದಲ್ಲಿರುವ ವೀರಮಂಗಲ ನದಿ ತಟಾಕದ ತನಕ 57 ಕಟ್ಟೆಗಳಲ್ಲಿ ದೇವರು ಕಟ್ಟೆ ಪೂಜೆಯನ್ನು ಪಡೆದುಕೊಂಡರು. ಸಾವಿರಾರು ಮಂದಿ ದಾರಿಯುದ್ದಕ್ಕೂ ದೇವರ ಸವಾರಿಯೊಂದಿಗೆ ಪಾದಯಾತ್ರೆ ನಡೆಸಿದರು. ಅಲ್ಲಲ್ಲಿ ಅಂಗಡಿಯರು, ಸಂಘಸಂಸ್ಥೆಗಳವರು ಭಕ್ತರಿಗೆ ಪಾನಕ, ಶರಬತ್ತು ಇನ್ನಿತರ ಕುಡಿಯುವ ವ್ಯವಸ್ಥೆಗಳನ್ನು ಹಾಗೂ ಸಿಹಿತಿಂಡಿಗಳನ್ನು ನೀಡಿದರು.