Udupi: ದಲಿತ ಚಳುವಳಿಗಳು ದುಡ್ಡಿದ್ದವರ ಪಾಲು: ಜಯನ್ ವಿಷಾದ
ಉಡುಪಿ: ಸಂವಿಧಾನ ಮರೆತರೆ ಭಾರತೀಯರಿಗೆ ಭವಿಷ್ಯವಿಲ್ಲ. ಸಂವಿಧಾನದ ಉಳಿವಿಗೆ ಸ್ವಾತಂತ್ರ್ಯ ಸಂಗ್ರಾಮದಂಥ ಹೋರಾಟದ ಅಗತ್ಯವಿದೆ. ಅಂದು ಮಹಿಳಾ ವಿಮೋಚನೆಗಾಗಿ ಅಂಬೇಡ್ಕರ್ ಕೊಡುಗೆ ಅಮೂಲ್ಯವಾಗಿತ್ತು. ಆದರೆ, ಇಂದು ದಲಿತ ಚಳವಳಿ ದುಡ್ಡಿದ್ದವರ ಪಾಲಾಗಿದೆ. ಸ್ವಾರ್ಥ ನಾಯಕರು ಅವರನ್ನು ಹಿಂಬಾಲಿಸುತ್ತಿದ್ದಾರೆ ಎಂದು ದಲಿತ ಚಿಂತಕ ಹಾಗೂ ಹೋರಾಟಗಾರ ಜಯನ್ ಮಲ್ಪೆ ವಿಷಾದಿಸಿದರು.
ಡಾ. ಅಂಬೇಡ್ಕರ್ ಜನ್ಮ ದಿನಾಚರಣೆ ಪ್ರಯುಕ್ತ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಭಾನುವಾರ ಆಯೋಜಿಸಿದ ಭೀಮಯಾನ ಮಹಾರ‍್ಯಾಲಿ ಉದ್ಘಾಟಿಸಿ ಮಾತನಾಡಿ, ಚುನಾವಣೆ ದಲಿತರ ಜಾಗೃತಿಯ ಸಂಕೇತ ಎಂದರು.
ಹಿರಿಯ ದಲಿತ ಚಿಂತಕ ನಾರಾಯಣ ಮಣೂರು ಮಾತನಾಡಿ, ಭಾರತದ ಜಾತಿ ವ್ಯವಸ್ಥೆಗೆ ಅಂಬೇಡ್ಕರ್ ನಿಜವಾದ ಮದ್ದು ನೀಡಿದ್ದಾರೆ. ನಾವು ಸಂವಿಧಾನ ಉಳಿಸುವ ಸಂಕಲ್ಪ ಮಾಡಬೇಕಾಗಿದೆ ಎಂದರು.
ಪ್ರಗತಿಪರ ಚಿಂತಕ ಸಂಜೀವ ಬಳ್ಕೂರು, ದಲಿತ ಹೋರಾಟಗಾರ ಶೇಖರ ಹೆಜಮಾಡಿ ಮಾತನಾಡಿದರು. ಮಲ್ಪೆ ಆರಕ್ಷಕ ಠಾಣಾಧಿಕಾರಿ ಪ್ರವೀಣ್ ಕುಮಾರ್ ಮತ್ತು ಸುನಿಲ್ ಡಿ’ಸೋಜ ರ‍್ಯಾಲಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಾದ ಅಶೋಕ್ ಕುಮಾರ್ ಕೊಡವೂರು, ಪ್ರಸಾದ್‌ರಾಜ್ ಕಾಂಚನ್, ಪ್ರಖ್ಯಾತ ಶೆಟ್ಟಿ, ಮಹಾಬಲ ಕುಂದರ್ ಮತ್ತು ರಮೇಶ್ ಕಾಂಚನ್, ಬ್ರಹ್ಮಶ್ರೀ ವಿಚಾರ ವೇದಿಕೆಯ ಸದಾಶಿವ ಕಟ್ಟೆಗುಡ್ಡೆ, ಮೀನಾಕ್ಷಿ ಮಾಧವ ಮೊದಲಾದವರಿದ್ಧರು.
ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್, ಸಂತೋಷ್ ಕಪ್ಪೆಟ್ಟು, ಗಣೇಶ್ ನೆರ್ಗಿ, ರವಿ ಲಕ್ಷ್ಮೀನಗರ, ಸುಧಾಕರ ಬಾಪುತೋಟ, ಅರುಣ್ ಸಾಲ್ಯಾನ್, ಸತೀಶ್ ಮಂಚಿ, ದೀಪಕ್ ಕೊಡವೂರು, ಸಾಧು ಚಿಟ್ಪಾಡಿ, ಸತೀಶ್ ಕಪ್ಪೆಟ್ಟು, ಭಗವಾನ್ ಮಲ್ಪೆ, ಸುಕೇಶ್ ಪುತ್ತೂರು, ಶಶಿಕಲಾ ತೊಟ್ಟಂ, ಸಂಧ್ಯಾ ತಿಲಕ್‌ರಾಜ್, ಸುರೇಶ್ ಚಿಟ್ಪಾಡಿ, ಬಿ.ಎನ್. ಪ್ರಶಾಂತ್ ಮೊದಲಾದವರಿದ್ದರು. ದಯಾಕರ್ ಮಲ್ಪೆ ಸ್ವಾಗತಿಸಿ, ಅಶೋಕ್ ಪುತ್ತೂರು ವಂದಿಸಿದರು.
ಬಳಿಕ ರ‍್ಯಾಲಿ ನಡೆಯಿತು.