Ujire: ಸರೋಜಿನಿದೇವಿ ನಿಧನ
Tuesday, April 16, 2024
ಉಜಿರೆ: ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ಅವರ ಪತ್ನಿ ಸರೋಜಿನಿದೇವಿ (81) ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳವಾರ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತಿ ಮತ್ತು ಮಗಳನ್ನು ಅಗಲಿದ್ದಾರೆ. ಮಗಳು ಶರ್ಮಿಳಾ ವಿದೇಶದಲ್ಲಿದ್ದು, ಬುಧವಾರ ಆಗಮಿಸಲಿದ್ದು ಬುಧವಾರ ಉಜಿರೆಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದು. ಸರೋಜಿನಿದೇವಿ ಮೂಲತಃ ಮೂಡಬಿದ್ರೆಯ ಬೆಟ್ಕೇರಿಯವರಾಗಿದ್ದು, ವಿವಾಹದ ಬಳಿಕ ಅವರು ಉಜಿರೆಯಲ್ಲಿ ವಾಸ್ತವ್ಯ ಇದ್ದರು.