Ullal: ಜಾಸ್ತಿ ಅಂತರದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು: ಡಾ. ಭಾರತೀ ಎಸ್. ಶೆಟ್ಟಿ
ಉಳ್ಳಾಲ: ಉಳ್ಳಾಲ ತಾಯಿ ಅಬ್ಬಕ್ಕ ಳಮಡಿಳಲ್ಲಿ ಬೆಳೆಯುವ ಉಳ್ಳಾಲ ಜನರು ಜಾಸ್ತಿ ಅಂತರದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು. ಪಕ್ಷದ ಬೆಳವಣಿಗೆ ಆಗಬೇಕು,ಪಕ್ಷ ಗೆಲ್ಲಬೇಕು, ಜೊತೆಗೆ ಮಹಿಳಾ ಸ್ವಾವಲಂಬನೆ ಆಗಬೇಕು. ಈ ಚುನಾವಣೆಯಿಂದ ನಮಗೆ ಒಳ್ಳೆಯದಾಗಬೇಕು ಎಂಬ ಉದ್ದೇಶದಿಂದ ನಾವು ಚುನಾವಣೆ ಎದುರಿಸುತ್ತಿದ್ದೇವೆ. ಮೋದಿಯಿಂದ ಬಹಳಷ್ಟು ಅಭಿವೃದ್ಧಿ ಕಂಡಿದೆ. ಮಹಿಳೆಯರ ಅಭಿವೃದ್ಧಿ ಆಗಬೇಕು ಎಂದಿದ್ದರು. ಮಹಿಳೆಯರು ಉತ್ಸಾಹ ದಿಂದ ಕಾರ್ಯ ನಿರ್ವಹಿಸಿ ಪಕ್ಷದ ಗೆಲುವಿಗೆ ದೊಡ್ಡ ಪಾತ್ರ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಭಾರತೀ ಎಸ್. ಶೆಟ್ಟಿ ಹೇಳಿದರು.
ಅವರು ಕೊಲ್ಯ ಕುಲಾಲಭವನಧಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಮಂಗಳೂರು ಮಂಡಲದ ವತಿಯಿಂದ ನಡೆದ ನಾರೀಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ಮೀಸಲಾತಿ ಬೇಕು ಎಂದು ಹೋರಾಟ ಮಾಡಿದ್ದರು. ಶೇ.೩೩ ಮಹಿಳಾ ಮೀಸಲಾತಿ ಎನ್ನುವುದು ನನ್ನ ಕನಸು ಎಂದು ಸೋನಿಯಾ ಗಾಂಧಿ ಹೇಳಿದ್ದರು. ಆದರೆ ಇದನ್ನು ನನಸು ಮಾಡಿದ್ದು ಮೋದಿ ಸರ್ಕಾರ ಆಗಿದೆ. ಮಹಿಳಾ ದೌರ್ಜನ್ಯ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ ನೀಡುತ್ತಿದ್ದರು.ಆದರೆ ಮೋದಿ ಸರ್ಕಾರ ಮಹಿಳಾ ದೌರ್ಜನ್ಯ ಎಸಗಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಡಾ ಭಾರತೀ ಎಸ್. ಶೆಟ್ಟಿ ಹೇಳಿದರು.
ಮಹಿಳಾ ಸಬಲೀಕರಣ ಕ್ಕೆ ವಿವಿಧ ಯೋಜನೆಗಳನ್ನು ಬಿಜೆಪಿ ಸರ್ಕಾರ ಹಮ್ಮಿಕೊಂಡಿದೆ. ಪೇಪರ್ ಮಾರುವ ಹುಡುಗನಿಂದ ಹಿಡಿದು ಸಣ್ಣ ಪುಟ್ಟ ಅಂಗಡಿ ವ್ಯಾಪಾರಿ ಗಳಿಗೂ ಸಾಲದ ಯೋಜನೆ ನೀಡಿದೆ. ಇವೆಲ್ಲ ಒಂದೇ ಸೂರಿನಡಿ ಸಿಗುತ್ತದೆ.ಈ ಯೋಜನೆ ಮಾತ್ರವಲ್ಲದೆ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಗ್ಯಾಸ್ ಸಿಲಿಂಡರ್ ವ್ಯವಸ್ಥೆ ಕೂಡ ಮೋದಿ ಸರ್ಕಾರ ಮಾಡಿದೆ.ದೇಶದಲ್ಲಿ ಶೇ 51 ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಿಳೆಯರಿಗೆ 2000 ರೂ. ನೇರ ಹಣ ಹೋಗಲು ಅದಕ್ಕೆ ಮೋದಿ ಸರ್ಕಾರ ಕಾರಣ. ಮೋದಿ ಜನಧನ್ ಖಾತೆ ಮಹಿಳೆಯರಿಗೆ ನೀಡಿದ ಕಾರಣ ಈ ಹಣ ನೇರ ವರ್ಗಾವಣೆ ಆಗುತ್ತಿದೆ. 80 ಕೋಟಿ ಜನರಿಗೆ ಅಕ್ಕಿ ವಿತರಣೆ ಮಾಡಲಾಗಿದೆ, ಕೊರೊನಾ ಕಾಲದಲ್ಲಿ 10 ಕೆಜಿ ಅಕ್ಕಿ ನೀಡಿದೆ. ಕಾಂಗ್ರೆಸ್ ಗ್ಯಾರಂಟಿ ನೀಡಿದೆ. ಕಾಂಗ್ರೆಸ್ ಚಾಕಲೇಟ್ ನೀಡಿದರೆ, ಮೋದಿ ಯವರು ಬದುಕು ಗ್ಯಾರಂಟಿ ನೀಡಿದ್ದಾರೆ. ಬದುಕು ಗಟ್ಟಿ ಗೊಳಿಸಲು ಮೋದಿ ಸರ್ಕಾರ ದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಬಿಜೆಪಿ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಮೋದಿ ಆಡಳಿತದಲ್ಲಿ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ಲಭಿಸಿದೆ. ನಾಮಪತ್ರದ ಠೇವಣಿಯ ೨೧,೦೦೦ ರೂ.ಗಳನ್ನು ನನಗೆ ಮಹಿಳೆಯರೇ ನೀಡಿದ್ದಾರೆ. ಬಿಜೆಪಿ ಪಕ್ಷದವರೇ ಅಲ್ಲದ ಮೋದಿ ಪರಿವಾರದ ಆ ಮಹಿಳೆಯರು ನನ್ನನ್ನ ಆಶೀರ್ವದಿಸಿ ನೀಡಿದ ಠೇವಣಿ ಹಣ ಅತ್ಯಮೂಲ್ಯವಾದುದು ಎಂದರು.
ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಜಿಲ್ಲಾ ಉಪಾಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿ.ಜೆ.ಪಿ. ಜಿಲ್ಲಾ ಮಹಿಳಾ ಕಾರ್ಯ ಸಂಚಾಲಕರಾದ ಕಸ್ತೂರಿ ಪಂಜ, ಧನಲಕ್ಷ್ಮೀ ಗಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಕೋಶಾಧಿಕಾರಿ ಸುಮನಾ ಶರಣ್, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮ ಶೆಟ್ಟಿ, ಫಲಾನುಭವಿ ಸಂಪರ್ಕದ ಜಿಲ್ಲಾ ಸಹ ಸಂಚಾಲಕರಾದ ಜಯಶ್ರೀ ಕರ್ಕೇರ, ಮಂಡಲ ಉಪಾಧ್ಯಕ್ಷರು, ಮಹಿಳಾ ಮೋರ್ಚಾದ ಪ್ರಭಾರಿ ಸುಮನಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಮೋರ್ಚಾದ ಮಂಡಲ ಅಧ್ಯಕ್ಷರಾದ ಮಾಧವಿ ಉಳ್ಳಾಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಮಲತಾ ಕಾರ್ಯಕ್ರಮ ನಿರೂಪಿಸಿ, ಹರಿಣಿ ವಂದಿಸಿದರು.