Bantwal: ಪಣೋಲಿಬೈಲು-ದಿನವೊಂದಕ್ಕೆ 8 ಕೋಲ ಸೇವೆಗೆ ಚಾಲನೆ
Saturday, May 4, 2024
ಬಂಟ್ವಾಳ: ತಾಲೂಕಿನ ಇತಿಹಾಸ ಪ್ರಸಿದ್ದ ಸಜಿಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ದಿನವೊಂದಕ್ಕೆ ತಲಾ 8 ಕೋಲ ಸೇವೆ ಶುಕ್ರವಾರದಿಂದ ಆರಂಭಗೊಂಡಿದೆ.
ಸಜಿಪ ಮಾಗಣೆ ಶ್ರೀ ನಡಿಯೇಲು ದೈಯ್ಯಂಗುಲು ದೈವದ ಅಪ್ಪಣೆಯಂತೆ ಪಣೋಲಿಬೈಲು ಕಲ್ಲುರ್ಟಿ ದೈವದ ಒಪ್ಪಿಗೆ ಪಡೆದು ಶುಕ್ರವಾರ 8 ಕೋಲ ಸೇವೆ ನಡೆಯಿತು. ಈಗಾಗಲೇ 22 ಸಾವಿರ ಕೋಲ ಸೇವೆ ಕಾದಿರಿಸಲಾಗಿದ್ದು, ಪ್ರಸಕ್ತ 2006ನೇ ವರ್ಷ ಭಕ್ತರು ಕಾದಿರಿಸಿದ ಕೋಲ ಸೇವೆ ನಡೆಯುತ್ತಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯಡಿ ಗರಿಷ್ಟ ಪ್ರಮಾಣದಲ್ಲಿ ಸರ್ಕಾರಕ್ಕೆ ಆದಾಯ ತರುವ ದೈವಸ್ಥಾನವಾಗಿ ಪಣೋಲಿಬೈಲು ಕ್ಷೇತ್ರ ಗುರುತಿಸಿಕೊಂಡಿದೆ.