Karkala: ಕಾರ್ಕಳದಲ್ಲಿ ಕಾರ್ಮಿಕ ದಿನಾಚರಣೆ
Wednesday, May 1, 2024
ಕಾರ್ಕಳ: ಕಾರ್ಕಳ ಬಸ್ ನಿಲ್ದಾಣದ ಬಳಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕಾರ್ಮಿಕ ಕಾನೂನು ತಿದ್ದುಪಡಿ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕಟ್ಟಡ ಸಂಘದ ಮುಖಂಡರಾದ ಶೇಖರ್ ಕುಲಾಲ್, ರತ್ನಕರ್, ಶ್ರೀನಿವಾಸ್ ನಾಯಕ್, ಲೇಮಿನಾ ಕಾರ್ಖಾನೆಯ ಮುಖಂಡರಾದ ಮೋಹನ್ ಚಂದ್ರ, ನಾಗೇಶ್, ಕಾರ್ಕಳ ಸಿಐಟಿಯು ಮುಖಂಡರಾದ ನಾಗೇಶ್, ಕಾರ್ಕಳ ತಾಲೂಕಿನ ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಜಯಶ್ರೀ, ಕೋಶಾಧಿಕಾರಿ ತುಳಸಿ, ಕಾರ್ಕಳ ತಾಲೂಕಿನ ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷೆ ಸುನೀತಾ ಶೆಟ್ಟಿ, ಮುಖಂಡರಾದ ಪ್ರಮೋದಿನಿ, ಪುಷ್ಪ ಉಪಸ್ಥಿತರಿದ್ದರು.