Ujire: ಮೂಲ ವಿಜ್ಞಾನದ ಆಧಾರದ ಅನ್ವಯಿಕತೆಯಿಂದ ಆವಿಷ್ಕಾರಗಳ ಸೃಜನಶೀಲತೆ: ಡಾ.ಬಿ.ಎ.ಕುಮಾರ ಹೆಗ್ಡೆ

Ujire: ಮೂಲ ವಿಜ್ಞಾನದ ಆಧಾರದ ಅನ್ವಯಿಕತೆಯಿಂದ ಆವಿಷ್ಕಾರಗಳ ಸೃಜನಶೀಲತೆ: ಡಾ.ಬಿ.ಎ.ಕುಮಾರ ಹೆಗ್ಡೆ


ಉಜಿರೆ: ವಿಜ್ಞಾನದ ಮೂಲಸ್ವರೂಪದ ಪ್ರಾಥಮಿಕ ತಿಳುವಳಿಕೆಯ ಆಧಾರದಲ್ಲಿ ಅನ್ವಯಿಕ ಜ್ಞಾನ ರೂಢಿಸಿಕೊಂಡಾಗ ಹೊಸ ಆವಿಷ್ಕಾರಗಳ ಸೃಜನಶೀಲತೆ ಸಾಧ್ಯವಾಗುತ್ತದೆ ಎಂದು ಎಸ್.ಡಿ.ಎಂಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಹೇಳಿದರು.

ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಭೌತಶಾಸ್ತ್ರ ಹಾಗೂ ಸಂಶೋಧನಾ ವಿಭಾಗ ಮತ್ತು ಚಾಮರಾಜನಗರದ ಗ್ರಾವಿಟಿ ಸೈನ್ಸ್ ಫೌಂಡೇಷನ್ ಜಂಟಿ ಸಹಯೋಗದಲ್ಲಿ ’ಭೌತಶಾಸ್ತ್ರದ ನೂತನಟ್ರೆಂಡ್, ಅವಕಾಶ ಮತ್ತುಅನ್ವಯಿಕತೆ’ ಕುರಿತು ಇಂದು ನಡೆದ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.

ವಿಜ್ಞಾನದ ಕುರಿತ ಪ್ರಾಥಮಿಕ ತಿಳುವಳಿಕೆಯ ಆಧಾರದಲ್ಲಿಯೇ  ತಂತ್ರಜ್ಞಾನದ ಅನ್ವಯಿಕತೆ ರೂಪುಗೊಳ್ಳುತ್ತದೆ. ಕುತೂಹಲದ ದೃಷ್ಟಿಕೋನವು ವಿಜ್ಞಾನದ ವಿಕಾಸಕ್ಕೆ ಭದ್ರ ತಳಹದಿ. ಕುತೂಹಲದ ಪ್ರಜ್ಞೆ ನಿರಂತರವಾಗಿದ್ದರೆ ವಿಜ್ಞಾನಿಯಾಗಿ ರೂಪುಗೊಳ್ಳಬಹುದು. ಹೊಸದೊಂದನ್ನು ಹುಡುಕುವ ಹಾದಿಯು ಪ್ರಶ್ನೆಗಳ ಮೂಲಕ ಅರ್ಥಪೂರ್ಣವಾಗುತ್ತದೆ. ಅಂಥ ಪ್ರಶ್ನೆಗಳ ಮೂಲಕ ವೈಜ್ಞಾನಿಕ ರಂಗದಲ್ಲಿ ಮಹತ್ವದ್ದನ್ನು ಸಾಧಿಸಬಹುದುಎಂದು ಹೇಳಿದರು.

ಜೀವನದ ಪ್ರತೀಘಟ್ಟದಲ್ಲಿ ವಿಜ್ಞಾನ, ತಂತ್ರಜ್ಞಾನದ ಕೊಡುಗೆಗಳು ಮಹತ್ವಪೂರ್ಣ ಪಾತ್ರವಹಿಸುತ್ತವೆ. ಈ ಕೊಡುಗೆಗಳನ್ನು ನೀಡುವುದಕ್ಕೆ ವಿಜ್ಞಾನಿಗಳಿಗೆ ಸಾಧ್ಯವಾಗಿದ್ದು ಅವರೊಳಗಿನ ಪ್ರಶ್ನಾತ್ಮಕ ಪ್ರಜ್ಞೆಯಿಂದ. ಇಂಥ ಪ್ರಜ್ಞೆಯು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ಪೂರಕವಾಗುತ್ತದೆಎಂದು ನುಡಿದರು. 

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲ ಫ್ರೋ.ಎಸ್.ಎನ್. ಕಾಕತ್ಕರ್, ಜೀವನದಲ್ಲಿ ಸಣ್ಣ ಸಣ್ಣ ವಿಷಯಗಳು ಪ್ರಮುಖ ಪಾತ್ರವನ್ನು ವಹಿಸಿ ಹೊಸ ವಿಚಾರಧಾರೆಗಳಿಗೆ ನಮ್ಮನ್ನು ತೆರೆದುಕೊಳ್ಳಲು ಸಹಾಯವನ್ನು ಮಾಡುತ್ತವೆ. ಮೂಲಭೂತ ವಿಷಯಗಳ ಮೊದಲ ತಿಳುವಳಿಕೆ ಅತ್ಯಗತ್ಯ. ದಿನನಿತ್ಯದಜೀವನದಲ್ಲಿ ಹೊಸ ತಿರುವುಗಳಿಗೆ ಇವು ಸಹಾಯ ಮಾಡುತ್ತವೆಎಂದು ತಿಳಿಸಿದರು. 

ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಹೊಸ ಹೆಜ್ಜೆಯಜೊತೆಗೆ ಹೊಸ ಸವಾಲುಗಳು ಎದುರಾಗುತ್ತವೆ. ಸೋಲುಗಳನ್ನು ಎದುರಿಸಬೇಕು. ಸೋಲುಗಳ ಮೆಟ್ಟಿಲು ಗೆಲುವಿನೆಡೆಗೆ ನಮ್ಮನ್ನುಕೊಂಡೊಯ್ಯುತ್ತದೆ. ಕುಗ್ಗದೇ ಮುನ್ನುಗ್ಗಬೇಕುಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಚಾಮರಾಜನಗರದಗ್ರಾವಿಟಿ ಸೈನ್ಸ್‌ನ ಸ್ಥಾಪಕ ಹಾಗೂ ಕಾರ್ಯದರ್ಶಿ ಅಭಿಷೇಕ್‌ಎ.ಎಸ್  ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥಡಾ.ರಾಘವೇಂದ್ರಅತಿಥಿ ಪರಿಚಯ ಮಾಡಿದರು.  ವಿದ್ಯಾರ್ಥಿಗಳಾದ ಪರೀಕ್ಷಿತ್‌ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀವಿದ್ಯಾ ಪ್ರಾರ್ಥಿಸಿದರು. ಪ್ರೀತಿ ಭಟ್ ಸ್ವಾಗತಿಸಿ ಗೀತಾಂಜಲಿ ಪೂಜಾರಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article