
Mangalore: ದೂರು ಸ್ವೀಕರಕ್ಕೆ ಹೆಚ್ಚುವರಿ 56 ವಿಶೇಷ ಪಡೆ ಮಂಜೂರು
ಮಂಗಳೂರು: ಮೆಸ್ಕಾಂನಲ್ಲಿ ದೂರುಗಳನ್ನು ಸ್ವೀಕರಿಸಲು ಮತ್ತೆ ಹೆಚ್ಚುವರಿಯಾಗಿ 56 ಸಂಖ್ಯೆಯ ವಿಶೇಷ ಪಡೆ ಮಂಜೂರು ಮಾಡಲಾಗಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
(ಅತ್ತಾವರ 4, ಕಾವೂರ್ 10, ಪುತ್ತೂರು 10, ಬಂಟ್ವಾಳ್ 7, ಉಡುಪಿ 2, ಕಾರ್ಕಳ 4 ಕುಂದಾಪುರ 8, ಶಿವಮೊಗ್ಗ 8, ಶಿಕಾರಿಪುರ 3) ವಿಭಾಗಗಳಲ್ಲಿ ವಿಶೇಷ ಪಡೆಗಳನ್ನು ಮಂಜೂರು ಮಾಡಲಾಗಿದೆ.
ಮಳೆಗಾಲದ ಸಂಭವನೀಯ ಅವಘಡಗಳನ್ನು ತಪ್ಪಿಸುವ ಸಲುವಾಗಿ ಮೆಸ್ಕಾಂ ವತಿಯಿಂದ ಈಗಾಲೇ 800 ಗ್ಯಾಂಗ್‌ಮೆನ್ ಮತ್ತು 56 ಸಂಖ್ಯೆಯ ವಿಶೇಷ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಮೆಸ್ಕಾಂನಾದ್ಯಂತ ಅಪಾಯಕಾರಿ ಸ್ಥಳಗಳನ್ನು ಪತ್ತೆಮಾಡಿ ಕ್ರಮಬದ್ಧಗೊಳಿಸಲು ವಿಶೇಷ ಅಭಿಯಾನ ವನ್ನು ಕೈಗೆತ್ತಿಕೊಳ್ಳಲಾಗಿದೆ. ಇದಲ್ಲದೆ 64 ಉಪವಿಭಾಗಗಳಲ್ಲಿಯೂ 24*7 ಸೇವಕೇಂದ್ರಗಳು ಗ್ರಾಹಕರ ದೂರುಗಳನ್ನು ಸ್ವೀಕರಿಸಿ, ಸರಿಪಡಿಸಲು ಕಾರ್ಯಾಚರಿಸುತ್ತಿವೆ.
ಗ್ರಾಹಕರು ತುರ್ತು ಸಂದರ್ಭಗಳಲ್ಲಿ ಮೆಸ್ಕಾಂ ಸಹಾಯವಾಣಿ 1912 ಗೆ ಕರೆಮಾಡಬಹುದಾಗಿದೆ. ಅಲ್ಲದೆ ಮೆಸ್ಕಾಂ ಫೇಸ್‌ಬುಕ್‌ಮ ಎಕ್ಸ್, ವಾಟ್ಸ್‌ಆಪ್ ನಂ, 9483041912, ವೆಬ್‌ಸೈಟ್ ಹಾಗೂ ಸೇವಾ ಸಿಂಧು ಮೂಲಕವೂ ಮೆಸ್ಕಾಂನ್ನು ತಲುಪಬಹುದಾಗಿದೆ.
ವಿಧಾನಸಭಾ ಅಧ್ಯಕ್ಷರ ಸೂಚನೆ ಮೇರೆಗೆ, ಅಪಾಯಕಾರಿ ಸನ್ನಿವೇಶಗಳ ಮಾಹಿತಿ ಸ್ವೀಕರಿಸುವುದಕ್ಕೋಸ್ಕರ ಎರಡು ಮೀಸಲಾದ ದೂರವಾಣಿಗಳನ್ನು ಸ್ಥಾಪಿಸಲಾಗುವುದು. ಅವು ಸೋಮವಾರದಿಂದ ಕಾರ್ಯಾರಂಭ ಮಾಡಲಿವೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.