
Mangalore: ಸೇತುವೆ ಮುಳುಗಡೆ-ಘನ ವಾಹನ ಸಂಚಾರ ನಿರ್ಬಂಧ
Saturday, June 29, 2024
ಮಂಗಳೂರು: ಜಿಲ್ಲೆಯ ಪುತ್ತೂರು ತಾಲೂಕಿನ ಪುತ್ತೂರು-ಪಾಣಾಜೆ ರಸ್ತೆಯ ದೇವಸ್ಯದಿಂದ ಚೆಲ್ಯಡ್ಕ ಮೂಲಕ ಸಂಪರ್ಕ ಕಲ್ಪಿಸುವ ಸೇತುವೆಯು ಭಾರಿ ಮಳೆಯ ನೀರಿನಿಂದ ಸಂಪೂರ್ಣ ಮುಳುಗಡೆಯಾಗಿರುವುದರಿಂದ ಮುಂದಿನ ಆದೇಶದವರೆಗೆ ಈ ಸೇತುವೆಯಲ್ಲಿ ಘನವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಆದೇಶಿಸಿದ್ದಾರೆ.
ಪುತ್ತೂರು ದೇವಸ್ಯ ಕಡೆಯಿಂದ ಪಾಣಜೆ ಕಡೆಗೆ ಸಂಚರಿಸುವ ಘನ ವಾಹನಗಳು ಚೆಲ್ಯಡ್ಕ ವರೆಗೆ ಸಂಚರಿಸಬಹುದು. ಪುತ್ತೂರು ಆರ್ಯಾಪು, ಸಂಪ್ಯ, ಸಂತಿಯಾರ್, ಬೆಟ್ಟಂಪಾಡಿ ಮುಖ್ಯ ರಸ್ತೆಯ ಮೂಲಕ ಪಾಣಜೆ ಕಡೆಗೆ ಘನ ವಾಹನಗಳು ಸಂಚರಿಸುವಂತೆ ಆದೇಶಿಸಿದ್ದಾರೆ.