
Mangalore: ‘ಭವಿಷ್ಯಕ್ಕಾಗಿ ಒಂದು ಗಿಡ’-ಸಹ್ಯಾದ್ರಿಯಲ್ಲಿ ಒಂದು ವಿಶಿಷ್ಟ ಬೀಳ್ಕೊಡುಗೆ ಕಾರ್ಯಕ್ರಮ
ಮಂಗಳೂರು: ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್‌ನ 2022-24ನೇ ಎಂಬಿಎ ತಂಡವನ್ನು ಸಹ್ಯಾದ್ರಿ ಕಿರಿಯ ಎಂಬಿಎ ವಿದ್ಯಾರ್ಥಿಗಳು ವಿಶಿಷ್ಟವಾಗಿ ಇತ್ತೀಚಿಗೆ ಬಿಲ್ಕೊಟ್ಟರು.
ಭವಿಷ್ಯಕ್ಕಾಗಿ ಒಂದು ಗಿಡ ಎಂಬ ಧ್ಯೇಯ ವಾಕ್ಯದೊಂದಿಗೆ ಹಿರಿಯ ಕಿರಿಯ ವಿದ್ಯಾರ್ಥಿಗಳು ವ್ಯಕ್ತಿಗೊಂದು ಗಿಡವೆಂಬಂತೆ ವಿವಿಧ ಬೀಜಗಳನ್ನು ಬಿತ್ತುವ ಮುಖಾಂತರ ಮುಂದಿನ ಪೀಳಿಗೆಗಾಗಿ ಒಂದೊಂದು ಗಿಡವನ್ನು ನೆಡುವ ಕಾರ್ಯಕ್ರಮ ಮಾಡಲಾಯಿತು. ಇಂದಿನ ಬದಲಾವಣೆಯ ಸಂದರ್ಭದಲ್ಲಿ ಬೀಳ್ಕೊಡುಗೆ ಎನ್ನುವುದು ಕೇವಲ ಡ್ಯಾನ್ಸ್‌ಗಳಿಗೆ ಸೀಮಿತವಾಗದೆ ವಿಶಿಷ್ಟವಾದ ಈ ಕಾರ್ಯಕ್ರಮದೊಂದಿಗೆ ನಡೆಸಿರುವುದು ವಿದ್ಯಾರ್ಥಿಗಳಲ್ಲಿ ಬೆಳೆದಿರುವ ಹೊಸ ಚಿಂತನೆಯಾಗಿದೆ.
ಸಹ್ಯಾದ್ರಿ ಕಾಲೇಜಿನ ಟ್ರಸ್ಟಿಯಾಗಿರುವ ದೇವದಾಸ್ ಹೆಗಡೆ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 300 ವಿವಿಧ ಬೀಜಗಳನ್ನು ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳು ಜೊತೆ ಸೇರಿ ಬಿತ್ತುವ ಈ ಕಾರ್ಯಕ್ರಮವನ್ನು ಕೃತಿನ್ ಅಮೀನ್ ಇವರು ಬೀಜ ಬಿತ್ತುವ ಮುಖಾಂತರ ಉದ್ಘಾಟಿಸಿದರು.
ಎಂಬಿಎ ವಿಭಾಗದ ನಿರ್ದೇಶಕ ಡಾ. ವಿಶಾಲ್ ಸಮರ್ಥ, ವಿದ್ಯಾರ್ಥಿ ಸಂಘಟನೆಯ ಸಂಯೋಜಕ ಪ್ರೊ. ಪದ್ಮನಾಭ, ಡೀನ್ ಪ್ರೊ. ರಮೇಶ್ ಕೆ.ಜಿ. ಹಾಗೂ ಇತರ ಉಪನ್ಯಾಸಕ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಲ್ಲಿ ಬೆಳೆದ ಗಿಡಗಳನ್ನು ಮುಂದಿನ ವರ್ಷ ಬೇರೆ ಬೇರೆ ಸ್ಥಳಗಳಲ್ಲಿ ನೆಡುವ ಜವಾಬ್ದಾರಿಯನ್ನು ಕಿರಿಯ ವಿದ್ಯಾರ್ಥಿಗಳಿಗೆ ವಹಿಸಲಾಗುವುದು ಈ ಮೂಲಕ ಹೊಸ ಸಸ್ಯಕ್ರಾಂತಿಯನ್ನು ಸಹ್ಯಾದ್ರಿಯ ಎಂಬಿಎ ವಿದ್ಯಾರ್ಥಿಗಳು ಆರಂಭಿಸಿದ್ದಾರೆ ಎನ್ನುವುದು ಒಂದು ಉತ್ತಮ ನಿದರ್ಶನವಾಗಿದೆ.