
Mangalore: ವಿಜಯಕುಮಾರಿಗೆ ಸಂಸ್ಕೃತ ವಿವಿಯಿಂದ ಡಾಕ್ಟರೇಟ್ ಪದವಿ
Sunday, June 16, 2024
ಮಂಗಳೂರು: ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಂಗಳೂರಿನ ದಂಬೆಲ್ ನಿವಾಸಿ, ಉಪನ್ಯಾಸಕಿ ವಿಜಯಕುಮಾರಿ ಅವರ ಸಂಶೋಧನೆಯ ಸಾಧನೆಗಾಗಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.
‘ನರಹರಿಪಂಡಿತವಿರಚಿತಾಯಾಃ ದೀಪಿಕಾಖ್ಯಾಯಾಃ ನೈಷಧವ್ಯಾಖ್ಯಾಯಾಃ ಪ್ರಥಮಸರ್ಗಾತ್ ತೃತೀಯಸರ್ಗಪರ್ಯಂತು ಪಾಠಸಮೀಕ್ಷಾತ್ಮಕಂ ಸಂಪಾದನಂ’ ಎಂಬ ಪ್ರಬಂಧಕ್ಕೆ ಈ ಗೌರವ ನೀಡಲಾಗಿದೆ.
ವಿಜಯಕುಮಾರಿ ಅವರು ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಗೌರವ ಉಪನ್ಯಾಸಕಿಯಾಗಿದ್ದು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಮಕೃಷ್ಣ ಭಟ್ಟ ಕೆ. ಅವರು ಮಾರ್ಗದರ್ಶನ ನೀಡಿದ್ದರು.
ವಿಜಯಕುಮಾರಿಯವರ ಪತಿ ಚಂದ್ರಶೇಖರ ಭಟ್ ಕಣ್ಣೂರಿನಲ್ಲಿ ಕಸ್ಟಮ್ಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.