Mangalore: ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮಾದಕ ದ್ರವ್ಯಗಳನ್ನು ಸೇವಿಸಲೇಬಾರದು: ನಜ್ಮ ಫರೂಕಿ

Mangalore: ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮಾದಕ ದ್ರವ್ಯಗಳನ್ನು ಸೇವಿಸಲೇಬಾರದು: ನಜ್ಮ ಫರೂಕಿ


ಮಂಗಳೂರು: ಮಾದಕ ದ್ರವ್ಯ ಸೇವನೆಯಿಂದ ವ್ಯಕ್ತಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಎದುರಿಸಬೇಕಾದ ತೊಂದರೆಗಳ ಬಗ್ಗೆ ವಿವರಿಸಿ, ನಾವು ಸೇವಿಸುವ ಔಷಧಿಗಳಲ್ಲೂ ಮಾದಕ ದ್ರವ್ಯದ ಅಂಶಗಳಿರುತ್ತವೆ ಆದರೆ ಅದು ಅಷ್ಟೊಂದು ಪರಿಣಾಮಕಾರಿ ಅಲ್ಲ. ಹಾಗಾಗಿ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದಾದ ಮಾದಕ ದ್ರವ್ಯಗಳನ್ನು ಸೇವಿಸಲೇಬಾರದು ಎಂದು ಮಂಗಳೂರು ನಗರ ಸಹಾಯಕ ಪೊಲೀಸ್ ಆಯುಕ್ತೆ ನಜ್ಮ ಫರೂಕಿ ಎಚ್ಚರಿಸಿದರು.

ಅವರು ಜೂ.26 ರಂದು ನಗರದ ದೇರೆಬೈಲ್ ಕೊಂಚಾಡಿಯಲ್ಲಿರುವ ಬೋಸ್ಕೋಸ್ ಪದವಿ ಪೂರ್ವ ಕಾಲೇಜಿನಲ್ಲಿ ‘ಅಂತರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣೆ ವಿರೋಧಿ ದಿನ’ದ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ವಾಹನ ಅಪಘಾತಗಳ ಕುರಿತು ಮನವರಿಕೆ ಮೂಡಿಸುವ ಉದ್ದೇಶದಿಂದ ಟ್ರಾಫಿಕ್ ನಿಯಮಗಳು ಮತ್ತು ರಸ್ತೆ ಸುರಕ್ಷತೆ ಬಗ್ಗೆ ವಿವರಿಸಿದರು.

ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಎಸ್. ಬೋಸ್ಕೊ, ಪ್ರಾಂಶುಪಾಲೆ ಡಾ. ವಿಜಯ ಕುಮಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶಿಫಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಉಪನ್ಯಾಸಕಿ ಪ್ರತಿಮಾ ಪಿ.ಕೆ. ಹಾಗೂ ಲಾವಣ್ಯ ಮಧುಸೂಧನ್ ಸಹಕರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article