Mangalore: ತ್ರಿಶಾ ಕ್ಲಾಸಸ್-ಸಿಎ ಇಂಟರ್ಮೀಡಿಯಟ್ ದಾಖಲಾತಿ ಆರಂಭ

Mangalore: ತ್ರಿಶಾ ಕ್ಲಾಸಸ್-ಸಿಎ ಇಂಟರ್ಮೀಡಿಯಟ್ ದಾಖಲಾತಿ ಆರಂಭ


ಮಂಗಳೂರು/ಉಡುಪಿ: 25 ವರ್ಷಗಳಿಂದ ಸಿಎ, ಸಿಎಸ್, ಮುಂತಾದ ವೃತ್ತಿಪರ ಕೋರ್ಸ್ ಗಳ ತರಬೇತಿಯನ್ನು ನೀಡುತ್ತಾ ಬಂದಿರುವ ತ್ರಿಶಾ ಸಂಸ್ಥೆಯು ಅಖಿಲ ಭಾರತ ಮಟ್ಟದಲ್ಲಿ ಸಿಎ ಫೌಂಡೇಶನ್ , ಸಿಎ ಇಂಟರ್ಮಿಡಿಯೇಟ್, ಸಿಎ ಫೈನಲ್, ಸಿಎಸ್ಇಇಟಿ, ಸಿಎಸ್ ಎಕ್ಸಿಕ್ಯೂಟಿವ್ ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಗಳಿಸಿಕೊಂಡಿದೆ.. 

ಭಾರತದ ಪ್ರತಿಷ್ಠಿತ ಸಂಸ್ಥೆಯಾದ ಐಸಿಎಐ ಚಾರ್ಟೆಡ್ ಅಕೌಂಟೆಂಟ್ ನ  ನೇರ ಪ್ರವೇಶಾತಿಯ ನಿಯಮಗಳನ್ನು ಬದಲಿಸಿದೆ. ಈ ನಿಯಮದ ಪ್ರಕಾರ ಪದವಿ ಮುಗಿಸಿದ ವಿದ್ಯಾರ್ಥಿಗಳು ನೇರವಾಗಿ ಸಿಎ ಎರಡನೇ ಹಂತವಾದ ಇಂಟರ್ಮಿಡಿಯೇಟ್ ಗೆ,  ನೇರ ಪ್ರವೇಶಾತಿ ಪಡೆಯಬಹುದು.

ಮುಂಚೆ ಪದವಿ ಪಡೆದ ವಿದ್ಯಾರ್ಥಿಗಳು 9 ತಿಂಗಳ ಆರ್ಟಿಕಲ್ ಶಿಪ್ ಮುಗಿಸಿ ಇಂಟರ್ಮಿಡಿಯೇಟ್ ಪರೀಕ್ಷೆ  ಬರೆಯಲು ಅರ್ಹರಾಗುತ್ತಿದ್ದರು ಮತ್ತು 3 ವರ್ಷದ ಆರ್ಟಿಕಲ್ ಶಿಪ್ ಅವಧಿಯನ್ನು ಪೂರೈಸಬೇಕಿತ್ತು. ಇದೀಗ ಹೊಸ ನಿಯಮದ ಪ್ರಕಾರ   ಪದವಿ ಮುಗಿಸಿ 8 ತಿಂಗಳ ಅಭ್ಯಾಸ ಅವಧಿಯನ್ನು ವಿದ್ಯಾರ್ಥಿಗಳು ಪಡೆದುಕೊಂಡು ಇಂಟರ್ಮಿಡಿಯೇಟ್ ನ ಎರಡು ಗುಂಪುಗಳನ್ನು ಉತ್ತೀರ್ಣಗೊಳಿಸಿ 2 ವರ್ಷದ ಆರ್ಟಿಕಲ್ ಶಿಪ್ ಅವಧಿಯನ್ನು ಮುಗಿಸಿ , ಫೈನಲ್ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಳ್ಳಬಹುದು.

ಪ್ರಸ್ತುತ ಸಾಲಿನ ದಾಖಲಾತಿ ಆರಂಭಗೊಂಡಿದ್ದು, ಅರ್ಹ ವಿದ್ಯಾರ್ಥಿಗಳಿಗೆ  ಶುಲ್ಕ ವಿನಾಯಿತಿಯನ್ನು ಸಂಸ್ಥೆ ನೀಡುತ್ತಿದೆ.  ಆಸಕ್ತರು ಉಡುಪಿಯ ಕೋರ್ಟ್ ಮುಂಭಾಗದಲ್ಲಿರುವ ತ್ರಿಶಾ ಕ್ಲಾಸಸ್ ಕಛೇರಿ ಅಥವಾ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜು ಮತ್ತು ಮಂಗಳೂರು ಅಳಕೆಯ ಶ್ರೀನಿಧಿ ಕಾಂಪ್ಲೆಕ್ಸ್ ನ 2ನೇ ಮಹಡಿಯಲ್ಲಿರುವ  ತ್ರಿಶಾ ಕ್ಲಾಸಸ್ ಗೆ ಭೇಟಿ ನೀಡಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

ತರಗತಿಯ ವಿಶೇಷತೆಗಳು:

• ರಾಷ್ಟ್ರದ ಬೇರೆ ಬೇರೆ ಭಾಗದ ಪ್ರಸಿದ್ಧ ಮತ್ತು ಅನುಭವಿ ವಿಷಯ ತಜ್ಞರಿಂದ ತರಬೇತಿ

• ವಿದ್ಯಾರ್ಥಿಗಳಿಗೆ ಸ್ಟಡಿ ಮೆಟಿರಿಯಲ್ 

• ಪರೀಕ್ಷಾ ಆಧಾರಿತ ರಿವಿಷನ್ ತರಗತಿಗಳು ಹಾಗೂ ಮಾಕ್ ಟೆಸ್ಟ್ ಸರಣಿ

• ಹಾಸ್ಟೆಲ್ ವ್ಯವಸ್ಥೆ

• ಉತ್ತಮ ಫಲಿತಾಂಶ

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article