Moodubidire: ಮೂಡುಬಿದಿರೆ ಪಂಚವಟಿ ಸೊಸೈಟಿಯಿಂದ ಲಕ್ಷಾಂತರ ರೂ. ವಂಚನೆ: ಸಿಐಡಿಗೆ ಮಾಹಿತಿ ನೀಡಲು ಮನವಿ

Moodubidire: ಮೂಡುಬಿದಿರೆ ಪಂಚವಟಿ ಸೊಸೈಟಿಯಿಂದ ಲಕ್ಷಾಂತರ ರೂ. ವಂಚನೆ: ಸಿಐಡಿಗೆ ಮಾಹಿತಿ ನೀಡಲು ಮನವಿ

ಮೂಡುಬಿದಿರೆ:  ಮರುಳು ಮಾತುಗಳನ್ನಾಡಿ ಜನರನ್ನು ತಮ್ಮತ್ತ ಸೆಳೆದು ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿದ ಪಂಚವಟಿ ಮಲ್ಟಿ ಸ್ಟೇಟ್ ಕೋ-ಆಪರೇಟಿವ್ ಸೊಸೈಟಿಯ ವಿರುದ್ಧ ಸಿಐಡಿ ಘಟಕದಲ್ಲಿ ತನಿಖೆ ನಡೆಯುತ್ತಿದ್ದು, ವಂಚನೆಗೆ ಒಳಗಾದವರು ತನಿಖಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಿಐಡಿ ಘಟಕವು ಪ್ರಕಟಣೆ ನೀಡಿದೆ.

ಹೆಚ್ಚಿನ ಲಾಭಾಂಶ ನೀಡುವುದಾಗಿ ಸಾರ್ವಜನಿಕರಿಂದ ಠೇವಣಿ ರೂಪದಲ್ಲಿ ಹಣ ಸಂಗ್ರಹಿಸಿ ಮೆಚ್ಯೂರಿಟಿ ಆದ ನಂತರವೂ ಸಹ ಹಲವಾರು ಬಾರಿ ಸೊಸೈಟಿಗೆ ಹೋಗಿ ಕೇಳಿದರೂ ದುಡ್ಡು ವಾಪಾಸ್ ಕೊಡದ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಐಡಿ ಆರ್ಥಿಕ ಅಪರಾಧಗಳ ವಿಶೇಷ ಘಟಕ ಈ ಬಗ್ಗೆ ತನಿಖೆ ನಡೆಸುತ್ತಿದೆ.

ಇದೀಗ ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಸಿಐಡಿ ಆರ್ಥಿಕ ಅಪರಾಧಗಳ ವಿಶೇಷ ವಿಚಾರಣಾ ವಿಭಾಗದ ಅಧಿಕಾರಿಗಳು ಮೂಡುಬಿದಿರೆಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಇನ್ಸ್ಪೆಕ್ಟರ್ ಹೆಚ್.ಎಸ್. ವೆಂಕಟೇಶ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಬೆಂಗಳೂರಿನ ಸಿಐಡಿ ವಿಶೇಷ ವಿಚಾರಣೆ ಘಟಕದ 9972621104 ಸಂಖ್ಯೆಗೆ ಕರೆ ಮಾಡಿ ವಂಚನೆಗೊಳಗಾದವರು ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article