
Moodubidire: ಪಂಚಶಕ್ತಿ ವಿ.ಸೌ.ಸ. ಸಂಘದಿಂದ ಸಹಾಯಧನ ವಿತರಣೆ
ಮೂಡುಬಿದಿರೆ: ಇಲ್ಲಿನ ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ, ಮೂಡುಬಿದಿರೆ ಇದರ ವತಿಯಿಂದ ವಿವಿಧ ಉದ್ದೇಶಕ್ಕಾಗಿ 12 ಮಂದಿಗೆ ಸಹಾಯ ಧನವನ್ನು ವಿತರಿಸಲಾಯಿತು.
ಬ್ರಹ್ಮಶ್ರೀ ಸ್ವ ಸಹಾಯ ತಂಡದ ಸದಸ್ಯೆರಾದ ಮಮತಾ ಅವರ ಮಗುವಿಗೆ ಹೃದಯ ಸಮಸ್ಯೆಯ ಚಿಕಿತ್ಸೆಗೆ 5000 ರೂ. ಸ್ಟಾರ್ ಸ್ವ ಸಹಾಯ ತಂಡದ ಸದಸ್ಯ ಅಬ್ದುಲ್ ಬಶೀರ್ ಅವರ ಕಾಲಿನ ಮೂಳೆಯ ಚಿಕಿತ್ಸೆಗೆ 3000, ಕವಿತಾ ಅವರ ವಿದ್ಯಾಭ್ಯಾಸಕ್ಕೆ 5000 ರೂ. ಪಂಚಮಿ ಸ್ವ-ಸಹಾಯ ತಂಡದ ಸದಸ್ಯೆ ಸುಪ್ರೀಯ ಅವರ ಪುತ್ರ ಸಂಚಿತ್ ಎಸ್. ಪೂಜಾರಿ ಅವರ ವಿಧ್ಯಾಭ್ಯಾಸಕ್ಕೆ ಸಹಾಯ ಧನ 8000, ವಿಖ್ಯಾತ್ ಎಂಬವರ ವಿದ್ಯಾಭ್ಯಾಸಕ್ಕೆ 5000 ರೂ. ದೀಪಾ ಸ್ವ-ಸಹಾಯ ತಂಡದ ಸದಸ್ಯರಾದ ರಘು ಅವರ ಪುತ್ರ ಪ್ರಣಮ್ ಎಂಬವರ ವಿದ್ಯಾಭ್ಯಾಸಕ್ಕೆ ಸಹಾಯ ಧನ 5000 ರೂ.
ಯಕ್ಷಿತಾ ಅವರ ಮನೆಯಲ್ಲಿ ವಿದ್ಯುತ್ ಸೌಲಭ್ಯವಿಲ್ಲದ ಕಾರಣ ಇಂಟಿರಿಯರ್ ಸೋಲಾರ್ ಅಳವಡಿಸಲು 6000 ರೂ., ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ವಿನೂತ ಅವರ ಚಿಕಿತ್ಸೆಗೆ 10000 ರೂ., ರಕ್ಷಣ್ ಆರ್. ಶೆಟ್ಟಿಯ ಮುಂದಿನ ವಿದ್ಯಾಭ್ಯಾಸಕ್ಕೆ 10000 ರೂ., ಗೀತಾ ಅವರ ಗೌರವ್ ಪೂಜಾರಿಯ ಮುಂದಿನ ವಿದ್ಯಾಭ್ಯಾಸಕ್ಕೆ 5000 ರೂ., ಶ್ರಾವಣಿ ಸ್ವ-ಸಹಾಯ ತಂಡದ ಸದಸ್ಯೆ ಸೀತಾ ಅವರ ತಾಯಿ ಸುಂದರಿ ಪೂಜರ‍್ತಿ ಅವರಿಗೆ ಮನೆ ನಿರ್ಮಾಣಕ್ಕೆ 10000 ರೂ., ಅನಾರೋಗ್ಯ ಹೊಂದಿರುವ ಜಯರಾಮ ಶೆಟ್ಟಿ ಅವರ ಚಿಕಿತ್ಸೆಗೆ 7500 ರೂ. ಹಾಗೂ ದೀಕ್ಷಿತ್ ಎಂಬವರ ವಿದ್ಯಾಭ್ಯಾಸಕ್ಕೆ 7500 ರೂ. ಸಹಾಯಧನದ ಚೆಕ್ಕನ್ನು ಹಸ್ತಾಂತರಿಸಲಾಯಿತು.
ಬ್ಯಾಂಕಿನ ಅಧ್ಯಕ್ಷ ರಂಜಿತ್ ಪೂಜಾರಿ, ಉಮಾಧ್ಯಕ್ಷೆ ಉಷಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಮಧ್ಯಸ್ಥ ಮತ್ತು ನಿರ್ದೇಶಕರುಗಳು ಈ ಸಂದರ್ಭದಲ್ಲಿದ್ದರು.