
Udupi: ಎಟಿಎಂನಲ್ಲಿ ಕಳವಿಗೆ ಯತ್ನ
Thursday, June 27, 2024
ಉಡುಪಿ: ನಗರದ ಪುತ್ತೂರು ಗ್ರಾಮದ ಸಂತೆಕಟ್ಟೆ ನವಮಿ ಬೇಕರಿ ಬಳಿಯ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಕಳ್ಳರು ಹಣ ದೋಚಲು ಯತ್ನಿಸಿರುವ ಘಟನೆ ಸಂಭವಿಸಿದ್ದು, ದೂರು ದಾಖಲಾಗಿದೆ.
ಕಳ್ಳರು ಆಯುಧದಿಂದ ಎಟಿಎಂನ ಬಾಗಿಲನ್ನು ಮುರಿದು ಒಳಗೆ ನುಗ್ಗಿ ಎಟಿಎಂನಲ್ಲಿದ್ದ ಹಣವನ್ನು ದೋಚಲು ಪ್ರಯತ್ನಪಟ್ಟಿದ್ದು, ನಂತರ ಎಟಿಎಂನ ಓಟಿಸಿ ಲಾಕ್, ಸೆನ್ಸಾರ್‌ನ್ನು ಹೊಡೆದು ಹಾಕಿ ನಷ್ಟವನ್ನುಂಟು ಮಾಡಿರುವುದಾಗಿ ದೂರಲಾಗಿದೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.