
Bantwal: ಅನಾಮಧೇಯ ಅಪ್ ಬಳಕೆ 9.20ಲಕ್ಷ ಕಳೆದುಕೊಂಡ ಸಂತ್ರಸ್ತ
Tuesday, July 9, 2024
ಬಂಟ್ವಾಳ: ಇಲ್ಲಿನ ವ್ಯಕ್ತಿಯೊಬ್ಬರು ವರ್ಕ್ ಫ್ರಂ ಹೋಂ ಕೆಲಸಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ನಡೆಸುತ್ತಿದ್ದ ವೇಳೆ ಅನಾಮಧೇಯ ಟೆಲಿಗ್ರಾಂ ಆಪ್ ಸಂದೇಶ ಸ್ವೀಕರಿಸಿದ ಪರಿಣಾಮ 9.20 ಲಕ್ಷ ರೂ. ಮೊತ್ತದ ಹಣ ಕಳೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಏ.11ರಂದು ವಕ್೯ ಫ್ರಂ ಹೋಂ ಕೆಲಸಕ್ಕೆ ಸಂಬಂಧಿಸಿದ ಸಂದೇಶ ಸ್ವೀಕರಿಸಿದ ಬಳಿಕ ಅಪರಿಚಿತ ವ್ಯಕ್ತಿಯೊಬ್ಬನ ಸೂಚನೆಯಂತೆ ತನ್ನ ಬ್ಯಾಂಕ್ ಖಾತೆಗಳಿಂದ ಬೇರೆ,ಬೇರೆ ಕಾರಣಕ್ಕೆ ಹಂತ, ಹಂತವಾಗಿ 9.20 ಲಕ್ಷ ರೂ. ಕಳೆದುಕೊಂಡಿರುವುದಾಗಿ ನಗರ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.