
Mangalore: ಇದ್ದಕ್ಕಿದ್ದಂತೆ ಸ್ಟಾರ್ಟ್ ಆದ ಆಟೋ
Monday, July 1, 2024
ಮಂಗಳೂರು: ಲಾಕ್ ಮಾಡಿ ನಿಲ್ಲಿಸಿದ್ದ ಅಟೋ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗಿ ಚಾಲನೆಗೊಂಡ ಘಟನೆ ಕಾರ್ಣಿಕ ಕ್ಷೇತ್ರ ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಶ್ರೀ ಸತ್ಯದೇವತೆ ದೈವಸ್ಥಾನ ಎದುರು ನಡೆದಿದೆ.
ದೈವಸ್ಥಾನದ ಮುಂದೆ ಎಲೆಕ್ಟ್ರಿಕ್ ಆಟೋ ನಿಲ್ಲಿಸಿ ಕೈ ಮುಗಿಯಲು ಹೋಗಿದ್ದ ಚಾಲಕ ಕೈ ಮುಗಿದು ವಾಪಸ್ ಬರುವಷ್ಟರಲ್ಲಿ ಆಟೋ ಇದ್ದಕ್ಕಿದ್ದಂತೆ ಚಾಲನೆಗೊಂಡ ಆಟೋ ಅಲ್ಲೇ ಕೈಮುಯುತ್ತಿದ್ದವನ ಬೈಕ್‌ಗೆ ಢಿಕ್ಕಿ ಹೊಡೆದಿದೆ. ನೋಡುನೋಡುತ್ತಿದ್ದಂತೆ ಚಲಿಸುವುದನ್ನು ಗಮನಿಸಿದ ಚಾಲಕ ಓಡಿಹೋಗಿ ಆಟೋ ನಿಲ್ಲಿಸಿದ್ದಾನೆ. ಜೂ.28 ರಂದು ಬೆಳಗ್ಗೆ 10.30 ಘಟನೆ ನಡೆದಿದೆ. ಇನ್ನು ಘಟನೆಯ ದೃಷ್ಯ ದೈವಸ್ಥಾನದ ಸಿ.ಸಿ.ಕ್ಯಾಮದಲ್ಲಿ ಸೆರೆಯಾಗಿದೆ.