Mangalore: ಭರತ್ ಶೆಟ್ಟಿಯವರ ಮೇಲೆ ಪ್ರಕರಣ ದಾಖಲಿಸಿರುವುದು ಖಂಡನೀಯ: ಶಾಸಕ ವೇದವ್ಯಾಸ ಕಾಮತ್

Mangalore: ಭರತ್ ಶೆಟ್ಟಿಯವರ ಮೇಲೆ ಪ್ರಕರಣ ದಾಖಲಿಸಿರುವುದು ಖಂಡನೀಯ: ಶಾಸಕ ವೇದವ್ಯಾಸ ಕಾಮತ್


ಮಂಗಳೂರು: ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ ಆರೋಪದಡಿ ಶಾಸಕ ಡಾ.ಭರತ್ ಶೆಟ್ಟಿಯವರ ಮೇಲೆ ಕಾಂಗ್ರೆಸ್ ನಾಯಕರ ಆಣತಿಯಂತೆ ರಾಜಕೀಯ ಪ್ರೇರಿತ ಪ್ರಕರಣ ದಾಖಲಾಗಿದ್ದನ್ನು ಶಾಸಕ ವೇದವ್ಯಾಸ ಕಾಮತ್ ಪ್ರಕಟಣೆಯಲ್ಲಿ ಖಂಡಿಸಿದ್ದಾರೆ.

ವಿದೇಶದಲ್ಲಿದ್ದಾಗ ಭಾರತದ ವಿರುದ್ಧ, ಸ್ವದೇಶದಲ್ಲಿದ್ದಾಗ ಹಿಂದೂಗಳ ವಿರುದ್ಧ ಹೇಳಿಕೆ ನೀಡುವ ರಾಹುಲ್ ಗಾಂಧಿಗೆ ಪ್ರತಿಭಟನೆ ಮೂಲಕ ಬಿಸಿ ಮುಟ್ಟಿಸದೇ ಹಾರ ಹಾಕಿ ಗೌರವಿಸಬೇಕಿತ್ತಾ? ಅಥವಾ ಬಹುಮಾನ ಘೋಷಿಸಬೇಕಿತ್ತಾ? ಕಾಂಗ್ರೆಸ್ಸಿಗರಿಗೆ ಅಂತಹ ದುರ್ಗತಿ ಬಂದಿರಬಹುದು. ನಮ್ಮದು ಎಂದಿಗೂ ರಾಷ್ಟ್ರ ಮೊದಲು ಎನ್ನುವ ಸಿದ್ಧಾಂತದ ಹಿನ್ನಲೆ ಹೊಂದಿರುವ ಪಕ್ಷ. ಹಿಂದುತ್ವ ಎನ್ನುವುದು ಈ ರಾಷ್ಟ್ರದ ಮೂಲ ತತ್ವ. ಅದಕ್ಕಾಗಿ ಒಂದಲ್ಲ, ನೂರು ಪ್ರಕರಣಗಳನ್ನು ಎದುರಿಸಲು ಸಿದ್ಧವೆಂದು ಸವಾಲೆಸೆದರು.

ಕಾಂಗ್ರೆಸ್ಸಿಗರು ಬಿಜೆಪಿ ನಾಯಕರ ಮೇಲೆ ಪ್ರಕರಣ ದಾಖಲಿಸುವ ಮೊದಲು ‘ಹಿಂದೂಗಳೆಂದು ಕರೆದುಕೊಳ್ಳುವವರು ಸದಾ ಹಿಂಸಾಚಾರ ಮತ್ತು ದ್ವೇಷವನ್ನು ಹರಡುವವರು, ಹಿಂದೂ ಪದದ ಅರ್ಥವೇ ಅಶ್ಲೀಲ, ಹಿಂದೂ ಭಯೋತ್ಪಾದನೆ, ರಾಮಾಯಣವೇ ಕಟ್ಟು ಕಥೆ’ ಮುಂತಾದ ಹೇಳಿಕೆ ನೀಡಿರುವ ಕಾಂಗ್ರೆಸ್ಸಿನ ಮಹಾನಾಯಕರ ಮೇಲೆ ಕೇಸ್ ದಾಖಲಿಸುವ ಧೈರ್ಯ ತೋರಲಿ ಎಂದು ಹೇಳಿ ಕೂಡಲೇ ಶಾಸಕ ಭರತ್ ಶೆಟ್ಟಿಯವರ ಮೇಲೆ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಬೇಕೆಂದು ಶಾಸಕ ವೇದವ್ಯಾಸ ಕಾಮತ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article