
Mangalore: ಕಾಂಕ್ರೀಟ್ ರಸ್ತೆ ಉದ್ಘಾಟನೆ
Monday, July 1, 2024
ಮಂಗಳೂರು: ಕುಳಾಯಿ 9ನೇ ವಾರ್ಡ್ ಅಡ್ಕ ಪ್ರದೇಶದಲ್ಲಿ ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಕಾಂಕ್ರೀಟ್ ರಸ್ತೆಯ ನಾಮಕರಣದ ಕಾರ್ಯಕ್ರಮವು ಜು.1 ರಂದು ಶಾಸಕರ ನೇತೃತ್ವದಲ್ಲಿ ನಡೆಯಿತು.
ಸ್ಥಳವನ್ನು ಉಚಿತವಾಗಿ ದಾನವಾಗಿ ನೀಡಿದ ಕುಳಾಯಿ ಗುತ್ತು ಜಗನ್ನಾಥ ಶೆಟ್ಟಿ ಮತ್ತು ಅವರ ಧರ್ಮಪತ್ನಿ, ಕುಟುಂಬಿಕರನ್ನು ಶಾಸಕರು ಶಾಲು ಹಾಕಿ ಗೌರವಿಸಿದರು.
ಮನಾಪ ಸದಸ್ಯೆ ವೇದವತಿ, ಯೋಗೀಶ್ ಸನಿಲ್ ಕುಳಾಯಿ, ಚಂದ್ರಹಾಸ ಕರ್ಕೆರ, ರತನ್, ಬೇಬಿ ಪದ್ಮನಾಭ ಮತ್ತು ಅಡ್ಕ ಪರಿಸರದ ನಾಗರಿಕರು ಉಪಸ್ಥಿತರಿದ್ದರು.