
Mangalore: ಮರ ಬಿದ್ದು ಮನೆಗೆ ಹಾನಿ ಶಾಸಕ ಕಾಮತ್ ಭೇಟಿ
Tuesday, July 9, 2024
ಮಂಗಳೂರು: ಕಳೆದ ರಾತ್ರಿ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಕುಲಶೇಖರದ ಸಿಲ್ವರ್ ಗೇಟಿನ ವೀರನಾರಾಯಣ ಕಟ್ಟೆ ಬಳಿಯ ಮನೋಹರ ಅಂಚನ್ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.
ಸ್ಥಳಕ್ಕೆ ಶಾಸಕ ವೇದವ್ಯಾಸ ಕಾಮತ್ ಅವರು ಭೇಟಿ ನೀಡಿ ತಕ್ಷಣ ಪರಿಹಾರ ಕಾರ್ಯದ ಬಗ್ಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ, ಇನ್ನಿತರ ಯಾವುದೇ ಮನೆಗಳಿಗೆ ಅಪಾಯಕಾರಿಯಾಗಿರುವಂತಹ ಸನ್ನಿವೇಶವಿದ್ದಲ್ಲಿ ಕೂಡಲೇ ಮುನ್ನೆಚ್ಚರಿಕಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಅಜಯ್ ಕುಲಶೇಖರ, ಸುಶಾಂತ್, ಹರಿಣಿ, ಪ್ರೇಮ್, ಚರಣ್, ಕಿರಣ್ ರೈ, ಅಶ್ವಿತ್ ಕೊಟ್ಟಾರಿ, ನವೀನ್ ಶೆಣೈ, ಪ್ರಶಾಂತ್, ರಾಮಚಂದ್ರ, ರತೀಶ್, ದಿನೇಶ್, ಶೇಖರ್, ವಿಜಯ್ ಮತ್ತಿತರರು ಉಪಸ್ಥಿತರಿದ್ದರು.