
Mangalore: ರಿಕ್ಷಾ ನಿಲ್ದಾಣ ಅಧಿಕೃತಗೊಳಿಸಲು ಮನವಿ
Wednesday, July 10, 2024
ಮಂಗಳೂರು: ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ಉಳ್ಳಾಲ ವಲಯ ಸಮಿತಿ ನೇತೃತ್ವದಿಂದ ಬೆಳ್ಮ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಜು.10 ರಂದು ರಿಕ್ಷಾ ನಿಲ್ದಾಣ ಅಧಿಕೃತಗೊಳಿಸಲು ಮನವಿ ನೀಡಲಾಯಿತು.
ಬೆಳ್ಮ ಗ್ರಾಮ ಪಂಚಾಯತ್‌ಗೆ ಒಳಪಟ್ಟಂತಹ ದೇರಳಕಟ್ಟೆಯ ಮೋರ್ ಸೂಪರ್ ಮಾರ್ಕೆಟ್ ಸಮೀಪ ಆಟೋ ರಿಕ್ಷಾ ನಿಲ್ದಾಣ ಸುಮಾರು 18-20 ವರ್ಷಗಳಿಂದ ಆಟೋ ಚಾಲಕರು ರಿಕ್ಷಾ ನಿಲ್ದಾಣದಲ್ಲಿ ದುಡಿಯುತ್ತಿದ್ದರು. ಉಳ್ಳಾಲ ತಾಲೂಕು ಅಭಿವೃದ್ಧಿ ಆಗುತ್ತಿರುವುದರಿಂದ ಮೋರ್ ಸೂಪರ್ ಮಾರ್ಕೆಟ್ ಬಳಿಯ ರಿಕ್ಷಾ ನಿಲ್ದಾಣವನ್ನು ಅಧಿಕೃತಗೊಳಿಸಿಕೊಡಲು ಮನವಿ ನೀಡಲಾಯಿತು.
ನಿಯೋಗದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅನ್ಸಾರ್, ತಾಲೂಕು ಅಧ್ಯಕ್ಷರು ಮುಸ್ತಕ್ ಆಲಿ, ತಾಲೂಕು ಗೌರವ ಸಲಹೆಗಾರ ಪ್ರಕಾಶ್ ಕುತ್ತಾರ್, ತಾಲೂಕು ಜಂಟಿ ಕಾರ್ಯದರ್ಶಿ ಇಬ್ರಾಹಿಂ ಮಡಕ, ಸದಸ್ಯರಾದ ರಫೀಕ್ ಕನೆಕೆರೆ, ಜಗದೀಶ್ ದೇರಳಕಟ್ಟೆ, ರಫೀಕ್ ಯೆನೆಪೋಯ, ಇಸ್ಮಾಯಿಲ್ ಕನೆಕೆರೆ, ಹಮೀದ್ ಪನೀರ್, ಸುಹೈಲ್ ಉಪಸ್ಥಿತರಿದ್ದರು.