.jpeg)
Mangalore: ಬಿಜೆಪಿ ಶಾಸಕರ ಮೇಲೆ ಕೇಸು ದಾಖಲಿಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ: ಸತೀಶ್ ಕುಂಪಲ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರ ಮೇಲೆ ನಿರಂತರ ಕೇಸು ದಾಖಲಿಸುವ ಕರ್ನಾಟಕದ ಕಾಂಗ್ರೆಸ್ ಸರಕಾರ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾದ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರ ಮೇಲೆ ಜನಪರ ನಿಲುವುಗಳನ್ನು ದಮನಿಸುವ ರೀತಿಯಲ್ಲಿ ಪೋಲಿಸ್ ಇಲಾಖೆಯನ್ನು ಉಪಯೋಗಿಸಿಕೊಂಡು ಕೇಸು ದಾಖಲಿಸುತ್ತಿದ್ದಾರೆ. ದೇಶದಲ್ಲಿ ವಿರೋಧ ಪಕ್ಷದ ನಾಯಕರಾಗಿ ಎಲ್ಲಾ ಸಮುದಾಯ ವರ್ಗಗಳನ್ನು ಸಮಾನವಾಗಿ ಪ್ರತಿನಿಧಿಸುವ ಬದಲು ಹಿಂದೂ ಧರ್ಮ ದ್ವೇಷಿಸುವ ಧರ್ಮ, ಹಿಂಸೆ ಪ್ರಚೋದಿಸುತ್ತಿರುವ ಧರ್ಮ ಎಂದು ಲೋಕಸಭೆಯಲ್ಲಿ ಹೇಳಿಕೆ ನೀಡುವ ಮೂಲಕ ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡಿರುವ ರಾಹುಲ್ ಗಾಂದಿಯವರ ವಿರುದ್ದ ಪ್ರತಿಭಟಸುತ್ತಾ ಹೇಳಿಕೆ ನೀಡಿದ ನಮ್ಮೆಲ್ಲರ ಕ್ರೀಯಾಶೀಲ ಶಾಸಕ ಡಾ. ವೈ. ಭರತ್ ಶೆಟ್ಟಿ ಯವರ ಮೇಲೆ ಕೇಸು ದಾಖಲಿಸಿರುವುದು ನಾಚಿಕೆಗೇಡು ಎಂದು ತಿಳಿಸಿದರು.
ವಿದಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಕಿದ ದೇಶ ದ್ರೋಹಿಗಳಿಗೆ ರಕ್ಷಣೆ ನೀಡಿದ ಕಾಂಗ್ರೇಸಿಗರು. ಮಂಗಳೂರು ಹೃದಯ ಭಾಗದಲ್ಲಿ ರಸ್ತೆ ಮಧ್ಯೆ ನಮಾಜ್ ಸಲ್ಲಿಸಿದವರ ಮೇಲೆ ಪೊಲೀಸ್ ಹಾಕಿದ ಕೇಸನ್ನು ಹಿಂತೆಗೆದುಕೊಳ್ಳುವ ಕಾಂಗ್ರೆಸ್ ಸರಕಾರ, ರಾಹುಲ್ ವಿರುದ್ಧ ಪ್ರತಿಭಟಿಸಿದ ಶಾಸಕ ಡಾ. ವೈ ಭರತ್ ಶೆಟ್ಟಿ ಮೇಲೆ ಕೇಸು ದಾಖಲಿಸಿರುವುದು ಇವರ ಹಿಂದೂ ವಿರೋಧಿ ಆಡಳಿತ ವೈಖರಿಯನ್ನು ಸಾಬೀತುಪಡಿಸುತ್ತದೆ. ದಕ್ಷಿಣ ಕನ್ನಡ ಕಾಂಗ್ರೇಸಿಗರು ನಿಮ್ಮ ನಾಯಕ ರಾಹುಲ್ ಗಾಂದಿ ಹಿಂದೂಗಳು ಹಿಂಸಾವಾದಿಗಳು, ದ್ವೇಷಿಗಳು, ಅಸತ್ಯವಾದಿಗಳು ಎಂದು ಹೇಳಿಕೆ ನೀಡಿದ್ದರು ಇದನ್ನು ದಕ್ಷಿಣ ಕನ್ನಡ ಕಾಂಗ್ರೇಸಿಗರು ಹಿಂದು ವಿರೋಧಿ ಹೇಳಿಕೆಯನ್ನು ಸಮರ್ಥಿಸುತ್ತೀರಾ?
ಹಿಂದೂ ವಿರೋಧಿ ಹೇಳಿಕೆ ನೀಡಿದ ರಾಹುಲ್ ಗಾಂಧಿ ಮೇಲೆ ಕೂಡ ಕೇಸು ದಾಖಲಿಸಿ ಓಲೈಕೆ ರಾಜಕಾರಣ ಮಾಡುವುದನ್ನು ಬಿಟ್ಟು ಜಾತ್ಯಾತೀತ ನಿಲುವು ಹೊಂದಿರುವ ನೀವು ಧರ್ಮ ಧರ್ಮಗಳ ಮಧ್ಯೆ ದ್ವೇಷ ಸಾದಿಸುವ ರಾಜಕಾರಣ ಮಾಡಿ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿರುವುದು ನಾಚಿಕೆಗೇಡು. ಡಾ. ವೈ. ಭರತ್ ಶೆಟ್ಟಿ ಮೇಲೆ ಕೇಸು ದಾಖಲಿಸಿರುವ ಮೂಲಕ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಲಿಕ್ಕೆ ರಾಜ್ಯ ಕಾಂಗ್ರೇಸ್ ಸರಕಾರ ಹೊರಟಿದೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಸೋತು ದೃತಿಗೆಟ್ಟಿರುವ ಕಾಂಗ್ರೆಸ್ ದ್ವೇಷದ ರಾಜಕಾರಣ ಮುಖಾಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸನ್ನು ಧಿಕ್ಕರಿಸಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.