
Mangalore: ಭರತ್ ಶೆಟ್ಟಿ ನಾಲಾಯಕ್ ಶಾಸಕರು
Tuesday, July 9, 2024
ಮಂಗಳೂರು: ರಾಹುಲ್ ಮೈ ಮುಟ್ಟುವ ತಾಕತ್ತು ನಿಮಗಿದೆಯೆ ಭರತ್ ಶೆಟ್ಟಿಯವರೇ.? ನೀವು ಶಾಸಕರಾಗಳು ನಾಲಾಯಕ್, ಸಂವಿಧಾನದ ಆಶಯದಂತೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿ, ನೀವು ರಸ್ತೆ ಬದಿ ಪುಡಿ ರೌಡಿಗಳ ರೀತಿ ವರ್ತಿಸುತೀರಿ. ನಿಮ್ಮ ಚೇಲಾಗಳನ್ನು ಖುಷಿಪಡಿಸಲು ಈ ರೀತಿ ಅಸಂವಿಧಾನಿಕ ಮಾತುಗಳನ್ನಾಡುವುದನ್ನು ಜಿಲ್ಲಾ ಯುವ ಕಾಂಗ್ರೆಸ್ ಖಂಡಿಸುತ್ತದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಗಿರೀಶ್ ಆಳ್ವ ಪ್ರಕಟಣೆಯಲ್ಲಿ ದೂರಿದ್ದಾರೆ.
ಈ ಜಿಲ್ಲೆಯ ಬಿಜೆಪಿ ಶಾಸಕರುಗಳು ತನ್ನ ಪಕ್ಷದೊಳಗೆ ನಾಯಕರಾಗಳು ಪೈಪೋಟಿಯಲ್ಲಿದ್ದಾರೆ. ನಿಮ್ಮ ಪೈಪೋಟಿ ನಿಮ್ಮ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿ ತೋರಿಸಿ. ಈ ರೀತಿ ವಿವಾದತ್ಮಕ ಹೇಳಿಕೆಗಳಿಂದ ಅಲ್ಲ, ನಮ್ಮ ಯುವ ಕಾರ್ಯಕರ್ತರಿಗೂ ನಿಮ್ಮದೇ ದಾಟಿಯಲ್ಲಿ ಉತ್ತರ ನೀಡಲು ಗೊತ್ತಿದೆ ಆದರೆ ಇದು ನಮ್ಮ ಸಂಸ್ಕೃತಿಯಲ್ಲ ಎಂದು ಗಿರೀಶ್ ಆಳ್ವ ಪ್ರಕಟಣೆಯಲ್ಲಿ ದೂರಿದ್ದಾರೆ.