
ನೂರಾರು ಜನರು ತಿರುಗುವ ರಸ್ತೆಯಲ್ಲಿ ದುರ್ವಾಸನೆ
Sunday, October 27, 2024
ಮಂಗಳೂರು: ನಗರದ ವಾತ್ಸಲ್ಯಧಾಮ ವೃದ್ದಾಶ್ರಮದ ಬಳಿ ಕೊಡಿಯಾಲ್ ಬೈಲ್ ನಿಂದ ಭಗವತಿ ದೇವಸ್ಥಾನಕ್ಕೆ ಹೋಗುವ ರಸ್ತೆ ಯಲ್ಲಿ ನೀರು ನಿಂತು ದುರ್ವಾಸನೆ ಬರುತ್ತಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಅನೇಕ ಜನರು ನಡೆಯುವ ಈ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಕೊಳಚೆ ನೀರಿನಲ್ಲಿ ನಡೆಯುವ ಪರಿಸ್ಥಿತಿ ಬಂದಿದೆ.
ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು ಇದನ್ನು ಪರಿಶೀಲಿಸಿ ಶಿಸ್ತು ಕ್ರಮ ಕೈಗೊಳ್ಳಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.