
ಶಾಮ್-ಇ-ಸರ್‌ಗಮ್ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ
ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನ ವತಿಯಿಂದ ಮಂಗಳೂರಿನ ಪುರಭವನದಲ್ಲಿ ಭಾನುವಾರ ನಡೆದ ಕೆನರಾ ಬ್ಯಾಂಕ್ ಪ್ರಯೋಜಕತ್ವದ ಶಾಮ್-ಇ-ಸರ್‌ಗಮ್ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ವಿನೂತನವಾಗಿ ಮೂಡಿಬಂತು. ಸಹಸ್ರಾರು ಪ್ರೇಕ್ಷಕರು ಇದಕ್ಕೆ ಸಾಕ್ಷಿಯಾದರು.
ಪ್ರಖ್ಯಾತ ಬಾನ್ಸುರಿ ವಾದಕ ಪಂ. ರಾಕೇಶ್ ಚೌರಾಸಿಯಾ ಅವರ ಬಾನ್ಸುರಿ ವಾದನ ಮತ್ತು ಪ್ರಸಿದ್ಧ ಸಿತಾರ್ ವಾದಕ ಪಂ.ಪೂರ್ಬಯಾನ್ ಚಟರ್ಚಿ ಅವರ ಸಿತಾರ್ ವಾದನ ಪ್ರೇಕ್ಷಕರ ಮನಸೂರೆಗೊಂಡಿತು.
ಪಂ. ರಾಕೇಶ್ ಚೌರಾಸಿಯ ಅವರ ಬಾನ್ಸುರಿ ವಾದನಕ್ಕೆ ಪ್ರಖ್ಯಾತ ತಬಲ ಪಟು ಮುಂಬಯಿಯ ಓಜಸ್ ಅದಿಯಾ ಸಹಕಾರ ನೀಡಿದರು. ಪಂ. ಪೂರ್ಬಯಾನ್ ಚಟರ್ಚಿ ಅವರ ಸಿತಾರ್ ವಾದನ ನಡೆಯಿತು. ಅವರಿಗೆ ತಬಲದಲ್ಲಿ ಮುಂಬಯಿಯ ಪ್ರಸಿದ್ಧ ತಬಲ ವಾದಕ ಸತ್ಯಜಿತ್ ತಲ್ವಾಲ್ಕರ್ ಅವರು ಸಾಥ್ ನೀಡಿದರು.
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಕ್ಕೆ ಕೆನರಾ ಬ್ಯಾಂಕ್ ಮುಖ್ಯ ಪ್ರಾಯೋಜಕರಾಗಿದ್ದು, ಐಡಿಯಲ್ ಐಸ್‌ಕ್ರೀಂ, ಎಂಆರ್‌ಪಿಎಲ್, ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಹ ಪ್ರಾಯೋಜಕರಾಗಿದ್ದರು.
ಗಣ್ಯರಿಂದ ಕಾರ್ಯಕ್ರಮ ಉದ್ಘಾಟನೆ:
ಕೆನರಾ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಸುಧಾಕರ್ ಕೊಟ್ಟಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಂಆರ್‌ಪಿಎಲ್ ಮುಖ್ಯ ಹಣಕಾಸು ಅಧಿಕಾರಿ ಯೋಗೀಶ್ ನಾಯಕ್, ಇನ್ಫೋಸಿಸ್‌ನ ಸಹ ಉಪಾಧ್ಯಕ್ಷ ಪ್ರಶಾಂತ್ ಕಾಮತ್, ರೇಡಿಯೋಲಜಿಸ್ಟ್ ಡಾ. ನವೀನ್ ಚಂದ್ರ ಶೆಟ್ಟಿ, ಆಭರಣ ಜುವೆಲ್ಲರಿಯ ಸಂಧ್ಯಾ ಕಾಮತ್, ಸಂಗೀತ ಭಾರತಿ ಪ್ರತಿಷ್ಠಾನ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್, ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್, ಕಾರ್ಯದರ್ಶಿ ಡಾ. ಉಷಾಪ್ರಭಾ ಎನ್. ನಾಯಕ್ ಉಪಸ್ಥಿತರಿದ್ಧರು.