ತಾನು ಓದಿದ ಪುಸ್ತಕವನ್ನು ವಿಮರ್ಶೆ ಮಾಡಿದಾಗ ಮಾತ್ರ ಪುಸ್ತಕದ ಮಹತ್ವ ಅರಿಯಲು ಸಾಧ್ಯ: ಪ್ರೊ. ಗಣಪತಿ ಗೌಡ

ತಾನು ಓದಿದ ಪುಸ್ತಕವನ್ನು ವಿಮರ್ಶೆ ಮಾಡಿದಾಗ ಮಾತ್ರ ಪುಸ್ತಕದ ಮಹತ್ವ ಅರಿಯಲು ಸಾಧ್ಯ: ಪ್ರೊ. ಗಣಪತಿ ಗೌಡ


ಮಂಗಳೂರು: ಓದಿನಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ಓದನ್ನು ಆಸ್ವಾದಿಸುವಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಉತ್ತಮ. ಒಬ್ಬ ವಿದ್ಯಾರ್ಥಿ ತಾನು ಓದಿದ ಒಂದು ಅಥವಾ ಎರಡು ಪುಸ್ತಕಗಳನ್ನು ವಿಮರ್ಶೆ ಮಾಡಿದಾಗ ಮಾತ್ರ ಪುಸ್ತಕದ ಮಹತ್ವ ಅರಿಯಲು ಸಾಧ್ಯ. ಯಾವಾಗ ನಾವು ಪುಸ್ತಕವನ್ನು ವಿಮರ್ಶೆ ಮಾಡುತ್ತೇವೆ ಆಗ ಆ ಪುಸ್ತಕದ ಬೆಲೆ ಏನು ಎಂಬುವುದು ಗೊತ್ತಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಹೇಳಿದರು.

ವಾಲ್ಮೀಕಿ ಜಯಂತಿಯ ಪ್ರಯುಕ್ತ ಅ.19 ರಂದು ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಾಲಯದಲ್ಲಿ ಆಂತರಿಕ ಗುಣಮಟ್ಟ ಖಾತರಿ ಕೂಶ, ಗ್ರಂಥಾಲಯ ಹಾಗೂ ಯೋಜನಾ ವೇದಿಕೆಯ ವತಿಯಿಂದ ವಾಲ್ಮೀಕಿ ಜಯಂತಿ ಹಾಗೂ ಗ್ರಂಥಾವಲೋಕನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಂಥಪಾಲಕಿ ಡಾ. ವನಜಾ ಮತ್ತು ಯೋಜನಾ ವೇದಿಕೆಯ ಸಂಚಾಲಕ ಡಾ. ಸುರೇಶ್ ಉಪಸ್ಥಿತರಿದ್ದರು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ವಾಲ್ಮೀಕಿ  ರಾಮಾಯಣವನ್ನು ವಿದ್ಯಾರ್ಥಿಗಳಾದ ಪವನ್ ಶೆಟ್ಟಿ ಮತ್ತು ಶಾಂತಾ ಡಿ. ಇಬ್ಬರೂ ಪುರಾಣದ ಬಗ್ಗೆ ಮಾತನಾಡಿದರು. 

ವಿದ್ಯಾರ್ಥಿಗಳಾದ ಶ್ರೀನಿವಾಸ ವಡ್ಡರ್ ಹಾಗೂ ಬಿಂದು ತಳವಾರ್ ಕ್ರಮವಾಗಿ ನಿರೂಪಿಸಿ, ವಂದಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article