ಬಂಧನ ಆದರೆ ಸಾಲದು, ಸರ್ಕಾರಿ ಸೇವೆಯಿಂದ ವಜಾಗೊಳಿಸಿ: ಸಂಜೀವ ಕಾಣಿಯೂರು ವಿರುದ್ಧ ಶಿರ್ತಾಡಿ ಬಿಲ್ಲವ ಸಂಘ ಮತ್ತು ಕೋಟಿ ಚೆನ್ನಯ ಯುವಶಕ್ತಿ ಅಳಿಯೂರು ದೂರು

ಬಂಧನ ಆದರೆ ಸಾಲದು, ಸರ್ಕಾರಿ ಸೇವೆಯಿಂದ ವಜಾಗೊಳಿಸಿ: ಸಂಜೀವ ಕಾಣಿಯೂರು ವಿರುದ್ಧ ಶಿರ್ತಾಡಿ ಬಿಲ್ಲವ ಸಂಘ ಮತ್ತು ಕೋಟಿ ಚೆನ್ನಯ ಯುವಶಕ್ತಿ ಅಳಿಯೂರು ದೂರು


ಮೂಡುಬಿದಿರೆ: ಬಿಲ್ಲವ ಸಮುದಾಯದ ಮಹಿಳೆಯರ ಬಗ್ಗೆ ನಿಂದನಾತ್ಮಕ ಹೇಳಿಕೆಯನ್ನು ನೀಡಿದ್ದ ಪುತ್ತೂರು ವ್ಯಾಪ್ತಿಯ ವಲಯ ಅರಣ್ಯಾಧಿಕಾರಿ ಸಂಜೀವ ಕಾಣಿಯೂರು ಎಂಬಾತನ ವಿರುದ್ಧ ಕೋಟಿ ಚೆನ್ನಯ ಯುವಶಕ್ತಿ ಅಳಿಯೂರು ಮತ್ತು ಬಿಲ್ಲವ ಸಮುದಾಯ ಸೇವಾ ಸಂಘ ಶಿರ್ತಾಡಿ ಇವರುಗಳ ಜಂಟಿ ತಂಡವು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿತು.

ಇತ್ತೀಚೆಗೆ ಆಡಿಯೋ ಒಂದರಲ್ಲಿ ಬಿಲ್ಲವ ಸಮುದಾಯದ ಮಹಿಳೆಯರು ಒಂದು ಲಕ್ಷ ಮಂದಿ ವೇಶ್ಯೆಯರಿದ್ದಾರೆ ಎಂಬಂತಹ ಮಾತುಗಳನ್ನಾಡಿ ಬಿಲ್ಲವ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿರುವ ಸಂಜೀವ ಕಾಣಿಯವರು ಎಂಬಾತನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದು ಸದ್ಯ ಆತ ಪೊಲೀಸ್ ಬಂಧನದಲ್ಲಿದ್ದಾನೆ. ಆದರೆ ಕೇವಲ ಬಂಧನ ಆದರೆ ಸಾಲದು ಇಂತಹ ಸಮಾಜಘಾತುಕ ಮತ್ತು ಸಮಾಜವನ್ನು ಒಡೆಯುವ ಕ್ರಿಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಆತನನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಬೇಕು ಎಂದು ದೂರುದಾರರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಸೋಮನಾಥಶಾಂತಿ, ಕೋಟಿ ಚೆನ್ನಯ ಯುವಶಕ್ತಿಯ ಸ್ಥಾಪಕ ಅಧ್ಯಕ್ಷ ವಿಶ್ವನಾಥ್ ಕೋಟ್ಯಾನ್, ಅಧ್ಯಕ್ಷ ಅರುಣ್ ಕುಮಾರ್, ಪ್ರಮುಖರಾದ ಲಕ್ಷ್ಮಣ ಸುವರ್ಣ, ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಕೋಟ್ಯಾನ್, ದೀಕ್ಷಿತ್ ಪಣಪಿಲ, ಬಿಲ್ಲವ ಸಂಘ ಶಿರ್ತಾಡಿ ಮಹಿಳಾ ಘಟಕದ ಅಧ್ಯಕ್ಷೆ ಸುಗಂಧಿ ಸುವರ್ಣ, ಕಾರ್ಯದರ್ಶಿ ನಳಿನಿ ರಮೇಶ್, ಆಡಳಿತ ಮಂಡಳಿ ಕಾರ್ಯದರ್ಶಿ ಪ್ರಮೀಳಾ, ವಿನೋದ, ಸುನಿಲ್ ಪಣಪಿಲ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article