ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಅಭಿಯಾನ

ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಅಭಿಯಾನ


ಪುತ್ತೂರು: ಹಲಾಲ್ ಮುಕ್ತ ದೀಪಾವಳಿ ಆಚರಿಸುವಂತೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಸೋಮವಾರ ಪುತ್ತೂರು ನಗರದಲ್ಲಿ ಕರಪತ್ರ ಹಂಚಿ ಅಭಿಯಾನ ನಡೆಸಲಾಯಿತು. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಕರಪತ್ರ ಹಂಚುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬಳಿಕ ನಗರಲ್ಲಿ ವಾಹನ ಚಾಲಕರು ಮತ್ತು ಇತರರಿಗೆ ಕರಪತ್ರ ಹಂಚಿಕೆ ಮಾಡಲಾಯಿತು. 

ಭಾರತದಲ್ಲಿ ಇಸ್ಲಾಂ ಮೇಲಾಧಾರಿತ ಹಲಾಲ್ ಆರ್ಥಿಕ ವ್ಯವಸ್ಥೆ ನಿರ್ಮಿಸಲು ಪ್ರಯತ್ನಗಳಾಗುತ್ತಿವೆ. ‘ಎಫ್‌ಎಸ್‌ಎಸ್‌ಎಐ’ ನಂತಹ ಸರ್ಕಾರಿ ಸಂಸ್ಥೆಯ ಪ್ರಮಾಣಪತ್ರ ತೆಗೆದುಕೊಂಡ ನಂತರವೂ ಇಸ್ಲಾಮೀ ಸಂಸ್ಥೆಗಳು ಸಾವಿರಾರು ರೂಪಾಯಿ ತೆಗೆದುಕೊಂಡು ಹಲಾಲ್ ಪ್ರಮಾಣಪತ್ರ ನೀಡುತ್ತಿವೆ. ಮಾಂಸಕಷ್ಟೇ ಸೀಮಿತವಾಗಿದ್ದ ಮೂಲ ಹಲಾಲ್ ಪರಿಕಲ್ಪನೆ ಈಗ ಸಸ್ಯಹಾರಿ ಪದಾರ್ಥ, ಎಣ್ಣೆ, ಚಾಕಲೇಟು, ಚಿಪ್ಸ್, ರೆಸ್ಟೋರೆಂಟ್ ಹೀಗೆ ಇನ್ನಿತರ ಸಾಮಾಗ್ರಿಗಳವರೆಗೆ ತಲುಪಿದೆ. ಹಾಗಾಗಿ ಹಲಾಲ್ ನಂತಹ ಉತ್ಪನ್ನಗಳನ್ನ ಹಿಂದೂಗಳಾದ ನಾವು ಉಪಯೋಗಿಸದೇ ಹಲಾಲ್ ಮುಕ್ತ ಆಚರಣೆ ಮಾಡಬೇಕಿದೆ. ಹಲಾಲ್ ಹಕ್ಕು ಮುಸಲ್ಮಾನರಿಹಗಷ್ಟೇ ಸೀಮಿತವಾಗಿದ್ದು, ಅದನ್ನು ಹಿಂದೂ ಹಾಗೂ ಇನ್ನಿತರ ಧರ್ಮದಮರ ಮೇಲೆ ಹೇರಲಾಗುತ್ತಿದೆ. ಭಾರತದಲ್ಲಿ ಹಿಂದೂಗಳು ಹಲಾಲ್ ಮುಕ್ತ ಸಾಮಾಗ್ರಿಗಳನ್ನ ಖರೀದಿಸಬೇಕು. ಭಾರತದಲ್ಲೇ ತಯಾರಾದ ಉತ್ಪನ್ನಗಳನ್ನ ಉಪಯೋಗಿಸುವ ಮೂಲಕ ಹಲಾಲ್ ಉತ್ಪನ್ನಗಳನ್ನ ಬ್ರೇಕ್ ಹಾಕಬೇಕು ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯವರು ಒತ್ತಾಯಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article