
ಗಾಂಜಾ ಮಾರಾಟ: ವ್ಯಕ್ತಿಯ ಬಂಧನ
Sunday, October 27, 2024
ಉಡುಪಿ: ಶಿವಳ್ಳಿ ಗ್ರಾಮದ ಪೆರಂಪಳ್ಳಿ ಸಾಯಿರಾಧಾ ಟೌನ್‌ಶಿಪ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡಲು ಹೊಂಚುಹಾಕುತ್ತಿದ್ದ ವ್ಯಕ್ತಿಯಿಂದ ಸುಮಾರು 2.344 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಅದರ ಮೊತ್ತ 1.87 ಲಕ್ಷ ರೂ. ಆಗಿದ್ದು, ಆರೋಪಿ ಕೆಳಾರ್ಕಳಬೆಟ್ಟುವಿನ ಅಬ್ದುಲ್ ಜಬ್ಬಾರ್ ಯಾನೆ ಜಬ್ಬಾರ್ (27) ಎಂಬಾತನನ್ನು ಸೆನ್ ಪಲೀಸರು ಬಂಧಿಸಿದ್ದಾರೆ.
ಕೃತ್ಯಕ್ಕೆ ಬಳಸುತ್ತಿದ್ದ ಒಂದು ಲಕ್ಷ ರೂ. ಮೌಲ್ಯದ ಸ್ಕೂಟರ್, ನಗದು 5,810 ರೂ., 10 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್, ವೆಯಿಂಗ್ ಮಿಶನ್ ಮತ್ತು ಚೂರಿಯೊಂದನ್ನು ವಶಪಡಿಸಿಕೊಳ್ಳಲಾಗಿದೆ.